ADVERTISEMENT

ಮಲೇಬೆನ್ನೂರು: ಸಿಡಿಲು ಬಡಿದು 4 ಹಸು ಸಾವು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:41 IST
Last Updated 11 ಜೂನ್ 2025, 14:41 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಮೃತಪಟ್ಟಿದ್ದ ಹಸುಗಳನ್ನು ಉಪತಹಶೀಲ್ದಾರ್‌ ಆರ್.‌ ರವಿ ಮಂಗಳವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು 
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಮೃತಪಟ್ಟಿದ್ದ ಹಸುಗಳನ್ನು ಉಪತಹಶೀಲ್ದಾರ್‌ ಆರ್.‌ ರವಿ ಮಂಗಳವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು    

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಗ್ರಾಮದ ನಾಗರಾಜಯ್ಯ ಅವರ ಕೊಟ್ಟಿಗೆಯಲ್ಲಿದ್ದ 4 ಹಸುಗಳು ಮಂಗಳವಾರ ರಾತ್ರಿ ಸಿಡಿಲು ಬಡಿದು ಸಾವಿಗೀಡಾಗಿವೆ.

‘ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ಸಿಡಿಲ ಹೊಡೆತಕ್ಕೆ ಸಿಲುಕಿ ಕೂಗಿಕೊಂಡವು. ಘಟನೆ ನಡೆಯುತ್ತಿದ್ದಂತೆ ವಿದ್ಯುತ್‌  ಸಂಪರ್ಕ ಕಡಿತವಾಯಿತು. ಬೆಂಕಿ ಕಾಣಿಸಿಕೊಂಡಿತು. ಮಳೆಯ ನಡುವೆಯೇ ಕೊಟ್ಟಿಗೆಯೊಳಗೆ ನೋಡಿದಾಗ 4 ಹಸುಗಳು ಸತ್ತು ಬಿದ್ದಿದ್ದವು’ ಎಂದು ಮಾಲೀಕ ನಾಗರಾಜಯ್ಯ ಅಲವತ್ತುಕೊಂಡರು.

ಜನರ ಸಹಕಾರದಿಂದ ಬೆಂಕಿ ನಂದಿಸಲಾಯಿತು ಎಂದು ಮಾಹಿತಿ ನೀಡಿದರು. 4 ಹಸುಗಳ ಮೌಲ್ಯ ₹ 3 ಲಕ್ಷ ಎಂದು ಅಂದಾಜು ಮಾಡಲಾಗಿದೆ.

ADVERTISEMENT

ಘಟನಾ ಸ್ಥಳಕ್ಕೆ ಉಪತಹಶೀಲ್ದಾರ್‌ ಆರ್.‌ ರವಿ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪಶು ವೈದ್ಯಾಧಿಕಾರಿ ಬಾಲಚಂದ್ರ ತೇಲಗಾರ್‌, ಪೊಲೀಸರು ಭೇಟಿ ನೀಡಿದ್ದರು.

ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.