ತ್ಯಾವಣಿಗೆ: ಸಮೀಪದ ಕಾರಿಗನೂರು-ಕತ್ತಲಗೆರೆ ನಡುವಿನ ರಸ್ತೆ ತಿರುವಿನಲ್ಲಿ ಬೈಕ್ ಸವಾರ ಪೈಪ್‌ಲೈನ್ ಕಾಲುವೆಯಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಸತೀಶ್ (26) ಮೃತ ವ್ಯಕ್ತಿ.
ಇವರು ಮಸ್ಕಿ ತಾಲ್ಲೂಕು ಹಾಸನಕಲ್ಲು ಗ್ರಾಮದವರು. ಭತ್ತ ಕೊಯ್ಲು ಮಾಡುವ ಯಂತ್ರದ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವಾರದಿಂದ ಈಚೆಗೆ ಕತ್ತಲಗೆರೆ ಸುತ್ತಮುತ್ತ ಗ್ರಾಮಗಳಲ್ಲಿ ಭತ್ತ ಕೊಯ್ಲು ನಡೆಸುತ್ತಿದ್ದರು.
ಕತ್ತಲಗೆರೆಯಲ್ಲಿ ತಂಗಿದ್ದ ಅವರು ಊಟ ತರಲು ಕತ್ತಲಗೆರೆಯಿಂದ ರಾತ್ರಿ ಕಾರಿಗನೂರು ಗ್ರಾಮಕ್ಕೆ ಹೋಗಿ ಹಿಂದುರುಗುತ್ತಿದ್ದಾಗ ಅವಘಡ ನಡೆದಿದೆ. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.