ADVERTISEMENT

ಸ್ನಾನಕ್ಕೆ ಹೋದ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:36 IST
Last Updated 22 ಸೆಪ್ಟೆಂಬರ್ 2021, 4:36 IST

ಮಾಯಕೊಂಡ: ಕಾಲೇಜಿಗೆಂದು ಬಂದು ಸ್ನೇಹಿತರ ಜತೆಗೆ ಸ್ನಾನಕ್ಕೆ ಹೋಗಿದ್ದ ಮಾಯಕೊಂಡ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ದಿಂಡದಹಳ್ಳಿಯ ಚಂದ್ರಪ್ಪ ಅವರ ಮಗ ಪ್ರವೀಣ್‌ (17) ಮೃತಪಟ್ಟ ವಿದ್ಯಾರ್ಥಿ. ಕಲಾ ವಿಭಾಗದ ಪ್ರಥಮ ಪಿಯು ವಿದ್ಯಾರ್ಥಿ ಆಗಿರುವ ಪ್ರವೀಣ್‌ ಮಂಗಳವಾರ ಕಾಲೇಜಿಗೆಂದು ಮನೆಯಿಂದ ಬಂದಿದ್ದ. ಬಳಿಕ ಐದಾರು ಮಂದಿ ಸ್ನೇಹಿತರ ಜತೆಗೆ ಮಾಯಕೊಂಡ ಕೆರೆಗೆ ಸ್ನಾನಕ್ಕೆ ತೆರಳಿದ್ದ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಕಿಲೋವತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT