ADVERTISEMENT

ಜಿಲ್ಲೆಗೆ 14,900 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಗೆ ಸಂಸದ ಸಿದ್ದೇಶ್ವರ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 14:54 IST
Last Updated 1 ಆಗಸ್ಟ್ 2020, 14:54 IST
ಸಿದ್ದೇಶ್ವರ
ಸಿದ್ದೇಶ್ವರ   

ದಾವಣಗೆರೆ: ಜಿಲ್ಲೆಗೆ ಎರಡು ತಿಂಗಳ ಕೋಟಾ 14,900 ಮೆಟ್ರಿಕ್ ಟನ್ ಸೇರಿ ಅಗತ್ಯವಿರುವಷ್ಟು ಯೂರಿಯಾವನ್ನು ಪೂರೈಕೆ ಮಾಡಬೇಕು ಎಂದುಸಂಸದ ಜಿ.ಎಂ. ಸಿದ್ದೇಶ್ವರ ಅವರುರಾಸಾಯನಿಕ ಗೊಬ್ಬರಖಾತೆ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿದ್ದಾರೆ.

ಒಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಮೆಕ್ಕೆಜೋಳಕ್ಕಾಗಿ ಜಿಲ್ಲೆಯಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಭತ್ತ ನಾಟಿ ಮಾಡಲು ಸಿದ್ಧತೆ ಆರಂಭಿಸಿರುವುದರಿಂದ ಯೂರಿಯಾ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಗೆ 13 ಸಾವಿರ ಮೆಟ್ರಿಕ್‍ ಟನ್‍ ಯೂರಿಯಾ ಪೂರೈಕೆಯಾಗಬೇಕಿತ್ತು. ಆದರೆ 9600 ಮೆಟ್ರಿಕ್‍ ಟನ್ ಮಾತ್ರ ಪೂರೈಕೆಯಾಗಿದೆ.

ಹರಪನಹಳ್ಳಿ ತಾಲ್ಲೂಕಿನ ರೈತರು ಬಳ್ಳಾರಿ ಬದಲಾಗಿ ದಾವಣಗೆರೆಯನ್ನೇ ಅವಲಂಭಿಸಿರುವುದರಿಂದ ಅವರಿಗೂ ತೊಂದರೆಯಾಗದಂತೆ ಜಿಲ್ಲೆಯಿಂದಲೇ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸಂಸದರು ಜಿಲ್ಲೆಯ ಜುಲೈ ತಿಂಗಳ ಕೋಟಾ 3400 ಮೆಟ್ರಿಕ್‍ಟನ್ ಹಾಗೂ ಆಗಸ್ಟ್ ತಿಂಗಳ ಕೋಟಾ 11,500 ಮೆಟ್ರಿಕ್‍ಟನ್‍ ಯೂರಿಯಾವನ್ನು ಶೀಘ್ರ ಪೂರೈಕೆ ಮಾಡುವಂತೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ

ADVERTISEMENT

ಸಂಸದರ ಮನವಿ ಮೇರೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಪೂರೈಕೆ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.