ADVERTISEMENT

ದಾವಣಗೆರೆ: ಬಾವಿಗೆ ಬಿದ್ದಿದ್ದ ಮೇಕೆ ರಕ್ಷಿಸಿದ ವೃದ್ಧ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:35 IST
Last Updated 20 ಸೆಪ್ಟೆಂಬರ್ 2020, 2:35 IST
ದಾವಣಗೆರೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಮೇಕೆ ರಕ್ಷಿಸಿದ ವೃದ್ಧ
ದಾವಣಗೆರೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಮೇಕೆ ರಕ್ಷಿಸಿದ ವೃದ್ಧ   

ದಾವಣಗೆರೆ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಆಂಜನೇಯ ಸ್ವಾಮಿಯ ದೇವಸ್ಥಾನದ ಹತ್ತಿರ ಇರುವ ಪಾಳು ಬಾವಿಯಲ್ಲಿ ಬಿದ್ದಿದ್ದ ಮೇಕೆಯನ್ನು ವೃದ್ಧರೊಬ್ಬರು ರಕ್ಷಿಸಿದ್ದಾರೆ.

ರೈತ ಅಣ್ಣಪ್ಪ ಅವರ ಮೇಕೆ ಮೇಯುತ್ತಾ ಪಾಳು ಬಾವಿಯಲ್ಲಿ ಬಿದ್ದಿತ್ತು. ಆಗ ಗ್ರಾಮದ 60 ವರ್ಷದ ಲಕ್ಷ್ಮಣ ನಾಯ್ಕ ಎಂಬವರು ಸೊಂಟಕ್ಕೆ ಹಗ್ಗ ಕಟ್ಟಿಕೊಟ್ಟು ಬಾವಿಗೆ ಇಳಿದರು. 60 ಅಡಿ ಆಳವಿದ್ದ ಈ ಬಾವಿಯಲ್ಲಿ ಗ್ರಾಮಸ್ಥರ ಸಹಾಯದಿಂದ ಮೇಕೆಯನ್ನು ರಕ್ಷಿಸಿದರು.

ಲಕ್ಷ್ಮಣನಾಯ್ಕ ಅವರು ಹಗ್ಗದ ಸಹಾಯದಿಂದ 30 ಅಡಿ ಮೇಲಕ್ಕೆ ಏರಿದರು. ಆನಂತರ ಕಟ್ಟಿಗೆ ಹಾಗೂ ಹಗ್ಗದ ಸಹಾಯದಿಂದ ಅವರನ್ನು ಮೇಲಕ್ಕೆ ಎತ್ತಿದರು.

ADVERTISEMENT

ಆಲೂರಿನ ಗ್ರಾಮ ಪಂಚಾಯಿತಿ ಪಿಡಿಒ ನಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಬಾವಿಗೆ ಕಬ್ಬಿಣದ ಜಾಲರಿ ಅಳವಡಿಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥ ನಾಗರಾಜ, ಎ.ಸಿ.ಮಂಜಪ್ಪ, ಎ.ಸಿ.ಬಸವರಾಜ, ಡಿ.ಜಿ. ಹನುಮಂತಪ್ಪ, ಎಸ್.ಮಹೇಶ್. ಜಯಪ್ಪ. ಸುರೇಶ್. ಗೌಡ್ರು ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.