ಮಲೇಬೆನ್ನೂರು: ಪಟ್ಟಣದಲ್ಲಿ ಭಾನುವಾರ ಬಾಲಕಿ ಹಾಗೂ ಇಬ್ಬರು ಯುವಕರಿಗೆ ನಾಯಿ ಕಚ್ಚಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ 6ನೇ ಬಡಾವಣೆಯಲ್ಲಿ ನಾಯಿಯೊಂದು ಈ ಮೂವರಿಗೆ ಕಚ್ಚಿದೆ. ಹುಚ್ಚು ನಾಯಿ ದಾಳಿ ನಡೆಸಿದೆ ಎಂಬ ಸುದ್ದಿ ಹರಡಿ ಕೆಲವರು ಮನೆಗಳ ಬಾಗಿಲು ಹಾಕಿಕೊಂಡಿದ್ದರು.
ಪಟ್ಟಣದಲ್ಲಿ ಕೆಲ ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.