ADVERTISEMENT

ವೀರಶೈವ, ಲಿಂಗಾಯತ ಒಂದೇ ಧರ್ಮವಾಗಿ ಉಳಿಯಲಿ: ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:24 IST
Last Updated 3 ಸೆಪ್ಟೆಂಬರ್ 2021, 4:24 IST

ದಾವಣಗೆರೆ: ವೀರಶೈವ ಲಿಂಗಾಯತ ಧರ್ಮ ಒಂದೇ ಧರ್ಮವಾಗಿ ಉಳಿಬೇಕೇ ವಿನಃ ಬೇರೆ ಆಗಬಾರದು ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು ‘ಸಮಸ್ತ ಲಿಂಗಾಯತ ಬೇಡಿಕೆ ಇದ್ದರೆ ತಮ್ಮವರೇ ಮುಖ್ಯಮಂತ್ರಿಗಳು, ಹಾಗೂ ಸಚಿವರು ಇದ್ದಾರೆ. ಸಭೆ ಕರೆದು ಅದರ ಸಾಧಕ–ಬಾಧಕಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕಾಗಿದೆ’ ಎಂದರು.

‘ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಪೀಠ ಸ್ಥಾಪನೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಇದ್ಯಾವುದು ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಎಲ್ಲರ ಜೊತೆ ಮಾತನಾಡುತ್ತೇನೆ’ ಎಂದರು.

ADVERTISEMENT

‘ಎಂ.ಬಿ. ಪಾಟೀಲ್‌ರಿಂದ ಕಾಂಗ್ರೆಸ್ ಸರ್ವನಾಶ’

ಎಂ.ಬಿ. ಪಾಟೀಲ್ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿ ಒಮ್ಮೆ ಕೈಸುಟ್ಟುಕೊಂಡಿದ್ದರು, ಇದೀಗ ಮತ್ತೇ ಅದೇ ಧರ್ಮದ ವಿಚಾರವಾಗಿ ಕೈ ಹಾಕಿದರೆ ಕಾಂಗ್ರೆಸ್ ಸರ್ವನಾಶ ಮಾಡಿದಂತೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.