ADVERTISEMENT

ದಾವಣಗೆರೆ: ಶಾಂತಿಸಾಗರದಿಂದ ಕಾಲುವೆಗೆ ನೀರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 4:31 IST
Last Updated 14 ಸೆಪ್ಟೆಂಬರ್ 2022, 4:31 IST
ಸೂಳೆಕೆರೆಯ ವಿಹಂಗಮ ನೋಟ
ಸೂಳೆಕೆರೆಯ ವಿಹಂಗಮ ನೋಟ   

ದಾವಣಗೆರೆ: ಶಾಂತಿ ಸಾಗರ ಕೆರೆಯು (ಸೂಳೆಕೆರೆ) ತುಂಬಿದ್ದು, ಕುಡಿಯಲು ಅವಶ್ಯ ಇರುವ ಪ್ರಮಾಣದ ನೀರು ಬಿಟ್ಟು ಉಳಿದ ನೀರನ್ನು ನಾಲೆಗಳಿಗೆ ಹರಿಸಲು ನಿರ್ಧರಿಸಲಾಗಿದೆ.

ಕುಡಿಯುವ ನೀರು 779 ಎಂಸಿಎಫ್‍ಟಿ ಬೇಕು. ಅದನ್ನು ಹೊರತುಪಡಿಸಿ 1003 ಎಂಸಿಎಫ್‌ಟಿ ನೀರು ಕೆರೆಯಲ್ಲಿದೆ. ಅದನ್ನು ನವೆಂಬರ್ 5ರ ವರೆಗೆ ಅರೆ ನೀರಾವರಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಾಗಿ ಹರಿಸಲಾಗುವುದು. ಸಿದ್ದನಾಲಾ ಕಾಲುವೆಯಲ್ಲಿ 60ಕ್ಯೂಸೆಕ್‌ ಮತ್ತು ಬಸವನಾಲಾ ಕಾಲುವೆಯಲ್ಲಿ 45 ಕ್ಯೂಸೆಕ್‌ನಂತೆ ನಿರಂತರವಾಗಿ ನೀರು ಹರಿಯಲಿದೆ.

ರೈತರು ಹೆಚ್ಚು ನೀರುಣ್ಣುವ ಬೆಳೆಯಾದ ಭತ್ತವನ್ನು ಬೆಳೆಯದೇ, ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ. ಬೆಳೆ ಮಾದರಿಯನ್ನು ಉಲ್ಲಂಘಿಸಬಾರದು. ನೀರಾವರಿ ಕಾಲುವೆ, ಕಟ್ಟಡಗಳಿಗೆ ಹಾನಿ ಉಂಟು ಮಾಡಬಾರದು. ಹೆಚ್ಚು ನೀರಿ, ಅನಧಿಕೃತವಾಗಿ ನೀರು ಬಳಸಬಾರದು ಎಂದು ಭದ್ರಾ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.