ADVERTISEMENT

ಎಂ.ಪಿ. ಪ್ರಕಾಶ ನಿಧನ: ಗಣ್ಯರ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:25 IST
Last Updated 10 ಫೆಬ್ರುವರಿ 2011, 9:25 IST

ಹುಬ್ಬಳ್ಳಿ: ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ನಿಧನರಾದುದಕ್ಕೆ ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ ಪಿ.ಸಿ. ಸಿದ್ಧನಗೌಡ್ರ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಎಂ. ಕೊರವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಇಸ್ಮಾಯಿಲ್ ಕಾಲೇಬುಡ್ಡೆ, ವಿ.ಐ. ಅಳಗುಂಡಗಿ, ಮಹಾನಗರ ಪಾಲಿಕೆ ಸದಸ್ಯರಾದ ಹಜರತ್‌ಅಲಿ ದೊಡಮನಿ, ಅಲ್ತಾಫ ಕಿತ್ತೂರ, ಫಮೀದಾ ಕಿಲ್ಲೇದಾರ, ಎನ್.ಎಚ್. ಕೋನರೆಡ್ಡಿ, ಜಾಫರ ಬಡೇಖಾನ್, ಬಸವರಾಜ ಬಿ. ಬೆಣಕಲ್, ಬಿ.ಬಿ. ಗಂಗಾಧರಮಠ ಮೊದಲಾದವರು ಹಾಜರಿದ್ದರು

ಶೆಟ್ಟರ ಸಂತಾಪ: ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದೇ ಹೆಸರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ದೈವಾಧೀನರಾದುದು ಕರ್ನಾಟಕದ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ವೀರಶೈವ ಸಂಘಟನಾ ಸಮಿತಿಯ ಚೆನ್ನಬಸಪ್ಪ ಧಾರವಾಡಶೆಟ್ರು, ಅಮರೇಶ ಹಿಪ್ಪರಗಿ, ವೀರಣ್ಣ ಕಲ್ಲೂರ, ಪಿ.ಎಂ. ಹೂಲಿ, ವೀರಣ್ಣ ಹಂಜಿ, ಅಂದಾನೆಪ್ಪ ಸಜ್ಜನರ, ಶ್ರೀಕಾಂತ ಕೆರೂರ, ಸಿ.ಎಚ್. ಗೊಬ್ಬಿ, ಯುವರಾಜ ಕೋಗೋಡ, ಎಂ.ಎಸ್. ಶಿರಗಣ್ಣನವರ, ಡಾ.ಎಸ್.ಎಸ್. ಲಿಗಾಡೆ ಸಂತಾಪ ಸೂಚಿಸಿದ್ದಾರೆ.

ಶ್ರದ್ಧಾಂಜಲಿ ಸಭೆ: ಹುಬ್ಬಳ್ಳಿಯ ಡಾ. ಮನೋಹರ ಲೋಹಿಯಾ ನಗರದಲ್ಲಿ ಡಾ.ರಾಮ ಮನೋಹರ ಲೋಹಿಯಾ ನಗರದ ಸುಧಾರಣಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.ನೀಲಕಂಠ ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ಲೋಹಿಯಾ ನಗರದ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗುರಿಕಾರ ಮಾತನಾಡಿದರು. ರಾಜು ಹಿರೇನಡೆಯರ, ಕಿರಣ ರಜಪೂತ, ನಾಗರಾಜ ನಾಡಕರ್ಣಿ, ಕೆ.ಎಸ್. ಭೀಮಣ್ಣವರ, ಐ.ಎಂ. ಕಿತ್ತೂರ, ಐ.ಎಸ್. ಸಾಸ್ವಿಹಳ್ಳಿ ಪಾಲ್ಗೊಂಡಿದ್ದರು.

ವ್ಯಾಪಾರಸ್ಥರ ಸಂಘ: ಸಂಘದ ಅಧ್ಯಕ್ಷ ರಾಜಶೇಖರ ಬತ್ಲೆ, ಉಪಾಧ್ಯಕ್ಷ ಎಂ.ಆರ್. ಮೇಲಗಿರಿ, ಗೌರವ ಕಾರ್ಯದರ್ಶಿ ಶಿವಶಂಕರಪ್ಪ ಮೂಗಬಸ್ತ ಹಾಗೂ ಸಹಕಾರ್ಯದರ್ಶಿ ಸುರೇಶ ಓಸ್ವಾಲ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಪೀತಾಂಬ್ರಪ್ಪ ಭಗವಂತ, ಕಾಂಗ್ರೆಸ್ ಮುಖಂಡ ಸದಾನಂದ ವಿ. ಡಂಗನವರ, ಅರವಿಂದ ಪಾಟೀಲ, ಸಿದ್ದು ಹಂಡೇದ, ಪ್ರವೀಣ ಶಲುಡಿ, ರವೀಂದ್ರ ನಾಯ್ಕ, ಎಡ್ವಿನ್ ಫರ್ನಾಂಡಿಸ್, ಮಹ್ಮದ್ ಅಗಸರ, ರಾಜು ಚಲವಾದಿ, ಗಂಗಾಧರ ಪೆರೂರ, ಮಾಲತೇಶ ಗೋನಾಳ ಹಾಗೂ ಆನಂದ ಮಗದುಮ್ ಕಂಬನಿ ಮಿಡಿದಿದ್ದಾರೆ.

ವಕೀಲರ ಸಂಘ: ಹಿರಿಯ ವಕೀಲ ಹಾಗೂ ಮತ್ಸದ್ದಿ ರಾಜಕಾರಣಿ  ಎಂ.ಪಿ. ಪ್ರಕಾಶ ಹಾಗೂ ರಂಗಭೂಮಿಯ ಪ್ರಖ್ಯಾತ ರಂಗ ಕಲಾವಿದ ಬಸವರಾಜ ಗುಡಗೇರಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬುಧವಾರ ನಗರದ ವಕೀಲರ ಸಂಘದ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.ಸಂಘದ ಅಧ್ಯಕ್ಷ ವಿ.ಬಿ. ನಡಗಡ್ಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಹಾಗೂ ಮತ್ತಿತರ ವಕೀಲರು ಸಭೆಯಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಘ: ಸಂಘದ ಅಧ್ಯಕ್ಷ ಎಂ.ಸಿ.ಹಿರೇಮಠ, ಗೌರವ ಕಾರ್ಯದರ್ಶಿ ಕೆ.ಡಿ.ಕೊಟೇಕರ, ಉಪಾಧ್ಯಕ್ಷರಾದ ಮೋಹನ ಟೆಂಗಿನಕಾಯಿ, ವಸಂತ ಲದವಾ, ಅಶೋಕ ನಿಲೂಗಲ್, ಜಂಟಿ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಮಾಜಿ ಅಧ್ಯಕ್ಷರಾದ ಕೆ.ಬಿ.ದೇಸಾಯಿ, ಸಿ.ಬಿ.ಪಾಟೀಲ, ಡಿ.ಎಸ್.ಗುಡ್ಡೋಡಗಿ, ಮದನ ದೇಸಾಯಿ, ಶಂಕರಣ್ಣ ಮುನವಳ್ಳಿ, ವಿ.ಪಿ.ಲಿಂಗನಗೌಡರ ಅವರು ಎಂ.ಪಿ.ಪ್ರಕಾಶ ಹಾಗೂ ಎನ್.ಬಸವರಾಜ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಸೇವಾದಳ: ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸೇವಾದಳ ಬುಧವಾರ ನಗರದಲ್ಲಿ ಆಯೋಜಿಸಿದ್ದ ಸಂತಾಪಸೂಚಕ ಸಭೆಯಲ್ಲಿ ಎಂ.ಪಿ.ಪ್ರಕಾಶ, ಎನ್.ಬಸವರಾಜ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ವಿ.ತುಂಗಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಸಂಘಟಕದ ಮಹೇಶ ಕಾರವಾರಕರ, ಸಂಘಟಕರಾದ ಆನಂದ ಮುರಗೋಡ, ದುರ್ಗಪ್ಪ ಪೂಜಾರ, ಹುಸೇನಭಾಷಾ ಸೌದಾಗರ, ಸರೋಜ ಹೂಗಾರ, ಕಮಲಾಕ್ಷಿ ದಂಡಿನ, ಶಹನಾಜ ಬೇಗಂ ನಾಯಕವಾಡಿ, ಮೇರಿ ಮುರಡಿ, ಗಿರಿಜಾ ಶೀಲವಂತ, ದಾಕ್ಷಾಯಣಿ ಬಸವರಾಜ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.