ADVERTISEMENT

`ಎಲ್ಲರನ್ನು ಮಾನವತೆಯಿಂದ ಕಾಣುವವರು ಬ್ರಾಹ್ಮಣರು'

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 9:17 IST
Last Updated 18 ಡಿಸೆಂಬರ್ 2012, 9:17 IST

ಹುಬ್ಬಳ್ಳಿ: `ಎಲ್ಲ ಜಾತಿಯ ಜನರೊಂದಿಗೆ ಮಾನವತೆಯಿಂದ ಕಾಣುವವರೇ ಬ್ರಾಹ್ಮಣರು' ಎಂದು ಖ್ಯಾತ ಹೃದಯ ರೋಗ ತಜ್ಞ ಡಾ.ಜಿ.ಬಿ. ಸತ್ತೂರ ಹೇಳಿದರು.ನವನಗರದ ಬಸವಾ ಲೇಔಟ್‌ನ ಬ್ರಾಹ್ಮಣ ಸಮುದಾಯ ಭವನದಲ್ಲಿ ಬ್ರಾಹ್ಮಣ ಸೇವಾ ಸಂಘವು ಭಾನುವಾರ ಏರ್ಪಡಿಸಿದ 108 ಸತ್ಯನಾರಾಯಣ ಪೂಜಾ ವ್ರತಾಚರಣೆ ಕಾರ್ಯ ಕ್ರಮ ಅಂಗವಾಗಿ ಸಹಸ್ರ ಚಂದ್ರ ದರ್ಶನ ಮಾಡಿದ ದಂಪತಿಗಳು ಹಾಗೂ ಶತಾಯುಷಿ ತಿಮ್ಮಾಜಿ ರಾಮಚಂದ್ರ ಕುಲ ಕರ್ಣಿ ಅವರ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಬ್ರಾಹ್ಮಣರು ಒಂದಾಗಬೇಕು ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮ ಣರು ರಾಜಕಾರಣದಲ್ಲಿ ಸಕ್ರಿಯರಾಗ ಬೇಕು' ಎಂದು ಉದ್ಯಮಿ ರಾಜಾ ದೇಸಾ ಯಿ ಸಲಹೆ ನೀಡಿದರು. `ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಬ್ರಾಹ್ಮಣರನ್ನು ನಿರ್ಲಕ್ಷಿಸಿವೆ' ಎಂದು ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಕಳವಳ ವ್ಯಕ್ತಪಡಿಸಿದರು.

`ನವನಗರದ ಬಸವಾ ಲೇಔಟ್‌ನಲ್ಲಿ 11 ಗುಂಟೆ ಜಾಗದಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಾಹ್ಮಣ ಸಮು ದಾಯ ಭವನ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೆರವು ನೀಡಬೇಕು' ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಾಹ್ಮಣ ಸಂಘದ ಅಧ್ಯಕ್ಷ ಸತೀಶ ದೀಕ್ಷಿತ್ ಕೋರಿದರು. ಚೈತನ್ಯಾಶ್ರಮದ ದತ್ತಾವಧೂತ ಗುರುಗಳು ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಎಂ.ಬಿ. ನಾತು, ಮೇಯರ್ ಡಾ.ಪಾಂಡುರಂಗ ಪಾಟೀಲ, ಜಿತೇಂದ್ರ ಮಜೇಥಿಯಾ, ರವಿ ದೇಶಪಾಂಡೆ, ಎನ್.ಎಚ್. ಕುಲಕರ್ಣಿ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಶಾಂತಪ್ಪ ದೇವಕ್ಕಿ, ರಾಘ ವೇಂದ್ರ ರಾಮದುರ್ಗ ಹಾಗೂ ಶಿವಾ ನಂದ ಮುತ್ತಣ್ಣವರ ಪಾಲ್ಗೊಂಡಿದ್ದರು.

ಭರವಸೆ: `ಬ್ರಾಹ್ಮಣ ಸಮುದಾಯ ಭವನಕ್ಕೆ ಅಗತ್ಯ ನೆರವು ನೀಡಲಾಗು ತ್ತದೆ' ಎಂದು ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು. ನಂತರ ಆಗಮಿಸಿದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸನ್ಮಾನ ಸ್ವೀಕರಿಸಿ, `ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮಾಜದವರನ್ನು ಸಮನಾಗಿ ಕಂಡಿರುವೆ. ಅನಿವಾರ್ಯವಾಗಿ ಕೆಜೆಪಿ ಕಟ್ಟಿದೆ. ಬ್ರಾಹ್ಮಣ ಸಮುದಾಯದವರು ಸಹಕರಿಸಬೇಕು' ಎಂದು ಕೋರಿದರು.

ಸನ್ಮಾನ: ಸಮಾರಂಭದಲ್ಲಿ 107 ವರ್ಷದ ತಮ್ಮಾಜಿರಾವ್ ಕುಲಕರ್ಣಿ ಹಾಗೂ ಸಹಸ್ರ ಚಂದ್ರ ದರ್ಶನ ಮಾಡಿದ ರಂಗನಾಥ ದೇಶಪಾಂಡೆ, ನಾರಾಯಣ ಕೊಂಡಿ, ಮಾಧವರಾವ್ ಪರ್ವತಿಕರ, ಶ್ರೀಪಾದ ಗಾಡಗೀಳ, ಗುರುನಾಥ ಗ್ರಾಮಪುರೋಹಿತ, ಆರ್. ಆರ್. ಕುಲಕರ್ಣಿ, ಎಸ್.ಕೆ. ನಾರಾಯ ಣರಾವ್, ವಿ.ಆರ್. ಕುಲಕರ್ಣಿ, ಬಿ.ಜಿ. ಪಾಟೀಲ, ಬಾಬಾಚಾರ್ಯ ಮುಂಡ ಗೋಡ ಹಾಗೂ ಚಂದ್ರಣ್ಣ ಜೋಶಿ ದಂಪತಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT