ADVERTISEMENT

‘ಕಥನ ಕಲೆ, ಕೌಶಲದಿಂದ ನೆನಪಿನಲ್ಲುಳಿಯುವ ಲೇಖಕ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 9:11 IST
Last Updated 12 ಅಕ್ಟೋಬರ್ 2017, 9:11 IST

ಧಾರವಾಡ: ‘ಅಪರೂಪದ ಕಥೆಗಳ ರಚನೆಯಿಂದಾಗಿ ರಾಮಚಂದ್ರ ಕೊಟ್ಟಲಗಿ ಓದುಗರ ಮನಸ್ಸಿನಲ್ಲಿ ಸದಾಕಾಲ ಉಳಿಯುತ್ತಾರೆ' ಎಂದು ಹರ್ಷ ಡಂಬಳ ಅಭಿಪ್ರಾಯಪಟ್ಟರು.

ಡಾ.ವರದರಾಜ ಹುಯಿಲಗೋಳ ಪುಣ್ಯಸ್ಮರಣೆ ಪ್ರಯುಕ್ತ ಸಾಧನಕೇರಿ ಚೈತ್ರ ಸಭಾಂಗಣದಲ್ಲಿ ಅನ್ವೇಷಣ ಕೂಟ ಏರ್ಪಡಿಸಿದ್ದ ‘ರಾಮಚಂದ್ರ ಕೊಟ್ಟಲಗಿಯವರ ಕಾದಂಬರಿಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ತಮ್ಮ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಬಳಸುವ ಮೂಲಕ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

ಪ್ರೊ. ದುಷ್ಯಂತ ನಾಡಗೌಡ ಮಾತನಾಡಿ, ‘ಹುಸಿ ಮೌಲ್ಯದ ಹವಸಲುಗಟ್ಟಿದ ಇಂದಿನ ದಿನಮಾನದಲ್ಲಿ ಬದುಕಿನ ಅನುಭವದ ಕ್ರೋಢೀಕರಣದ ಇಂಥ ಕೃತಿಗಳ ಓದುವಿಕೆ ನಮ್ಮ ಕಣ್ತೆರೆಸುವ ಕೆಲಸಮಾಡುತ್ತವೆ’ ಎಂದರು.

ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ.ಕಾಖಂಡಿಕಿ ಡಾ.ರಮಾಕಾಂತ ಜೋಶಿ, ಆನಂದ ಝುಂಜರವಾಡ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ. ಆರ್.ಬಿ.ಚಿಲುಮಿ, ಮನೋಜ ಪಾಟೀಲ, ಹ.ಶಿ.ಭೈರನಟ್ಟಿ, ಮತ್ತಿತರರು ಇದ್ದರು.  ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಪ್ರತಿಮಾ ಕಲಕೇರಿ ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ಗಜಾನನ ಹೆಗಡೆ ತಬಲಾ ಸಾಥ್ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.