ADVERTISEMENT

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ 9ರಂದು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 7:03 IST
Last Updated 6 ಡಿಸೆಂಬರ್ 2012, 7:03 IST

ಸಂಶಿ (ಕುಂದಗೋಳ): ಸ್ಥಳೀಯ ಸಂಶಿ ಚಾಂಪಿಯನ್ ಸ್ಪೋರ್ಟ್ ಕ್ಲಬ್ ಹಮ್ಮಿಕೊಂಡಿರುವ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲಾ ಮಟ್ಟದ 6-ಎ ಸೈಡ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಇಲ್ಲಿಗೆ ಸಮೀಪದ ಶಿರೂರ ಗ್ರಾಮದಲ್ಲಿ ಇದೇ 9ರಂದು ನಡೆಯಲಿದೆ.

ಪ್ರಥಮ ಬಹುಮಾನ ರೂಪಾಯಿ ಹತ್ತು ಸಾವಿರದ ಒಂದು (ದಾನಿ ಶಿವಾನಂದ ಬೆಂತೂರ), ದ್ವಿತೀಯ ಬಹುಮಾನ ರೂಪಾಯಿ ಏಳು ಸಾವಿರದ ಒಂದು (ದಾನಿ ರುದ್ರಪ್ಪ ಗಾಣಿಗೇರ), ಉತ್ತಮ ತಂಡಕ್ಕೆ ರೂಪಾಯಿ ಐದು ಸಾವಿರದ ಒಂದು (ದಾನಿ ಚಂದ್ರಣ್ಣಾ ಜುಟ್ಟಲ) ನೀಡಲಾಗುವುದು.

ವಿವಿಧ ವೈಯಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುವದು. ಆಸಕ್ತರು ತಂಡದವರ ಹೆಸರನ್ನು ಮುತ್ತಣ್ಣ (9945983881), ಪ್ರವೀಣ (7411031124), ವಿನಾಯಕ (9964735038) ಅಥವಾ ಕುಮಾರ (9964936905) ಅವರ ಬಳಿ ಇದೇ 8 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ಕೊಕ್ಕೊ ತಂಡಕ್ಕೆ ನೀಲಮ್ಮ ಆಯ್ಕೆ
ಕುಂದಗೋಳ:
ಸ್ಥಳೀಯ ಜಿ.ಎಸ್. ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ನೀಲಮ್ಮ ದೊಡ್ಡಮನಿ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳೆಯರ ಕೊಕ್ಕೊ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಮುಖ್ಯಸ್ಥ ಗಿರೀಶ ಪಾಟೀಲ, ಪ್ರಾಚಾರ್ಯ ಪ್ರೊ. ಅರ್.ಟಿ. ಹಿರೇಗೌಡರ ಮತ್ತು ದೈಹಿಕ ನಿರ್ದೇಶಕ ಎಂ.ವಿ. ನಸಬಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.     

`ಕ್ರೀಡೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿ'
ಧಾರವಾಡ: `
ಇಂದಿನ ಮಕ್ಕಳು ಪಠ್ಯಕ್ಕೆ ನೀಡಿದಷ್ಟು ಆದ್ಯತೆಯನ್ನು ಕ್ರೀಡೆಗಳಿಗೂ ನೀಡಬೇಕು ಅಲ್ಲದೇ ಕ್ರೀಡೆಗಳಿಂದ ಮಕ್ಕಳು ದೈಹಿಕವಾಗಿ ಸದೃಢರಾಗುತ್ತಾರೆ' ಎಂದು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ರಾಜಾ ದೇಸಾಯಿ ಹೇಳಿದರು.

ನಗರದ ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಪ್ರೌಢ ಶಾಲಾ ವಿಭಾಗದ ಅಂತರ ನಿಲಯಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ನೀಡುವ ಮೂಲಕ ಗುರುವಾರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಕ್ರೀಡೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ವ್ಯಕ್ತಿತ್ವ ವಿಕಸನವಾಗಲು ಕ್ರೀಡೆ ತುಂಬಾ ಸಹಾಯಕಾರಿಯಾಗಿದ್ದು, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ. ಕೇವಲ ಅಭ್ಯಾಸದಲ್ಲಿ ಮಾತ್ರ ಮುಂದುವರೆದವರು ಜೀವನದಲ್ಲಿ ಸಫಲರಾಗಲು ಸಾಧ್ಯವಿಲ್ಲ. ಸಮಗ್ರ ಜೀವನ ನಿರ್ವಹಣೆಗೆ ಕ್ರೀಡೆ ಅತ್ಯವಶ್ಯವಾಗಿದೆ ಎಂದ ಅವರು, ಕ್ರೀಡೆ ಮನುಷ್ಯನ ಅಂಗವಾಗಬೇಕು' ಎಂದರು.

ಶಾಲಾ ಸುಧಾರಣಾ ಸಮಿತಿ ಕಾರ್ಯಾಧ್ಯಕ್ಷ ಪಿ.ವಿ.ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಅತಿಥಿಗಳು ಹಸಿರು, ಗುಲಾಬಿ, ನೀಲಿ ಹಾಗೂ ಕೆಂಪು ಪಥವೀಕ್ಷಣೆ ಮಾಡಿದರು.

ಉಪಪ್ರಾಚಾರ್ಯ ಜಿ.ಆರ್.ಭಟ್, ಎಸ್. ಎಂ.ಬೋಂಗಾಳೆ, ಎ.ಎಸ್.ಚಿಕ್ಕಳ್ಳಿ, ಎಸ್.ಬಿ.ಕಡಕೋಳದವರ, ಪ್ರಸಾದ ಎಲಿಗಾರ ಇದ್ದರು. ಶಿವಲೀಲಾ ಪಟ್ಟಣಶೆಟ್ಟಿ, ನೇತ್ರಾ ಕಡಗದ ನಿರೂಪಿಸಿದರು. ಬಿ.ಸಿ.ಶಿರಗಾಂವಕರ ವಂದಿಸಿದರು.


ಕ್ರಿಸ್‌ಮಸ್: ನೆರವು ವಿತರಣೆ
ಹುಬ್ಬಳ್ಳಿ
: ಗಾಂಧಿವಾಡ ಯುವ ಒಕ್ಕೂಟವು ಈ ವರ್ಷದ ಕ್ರಿಸ್‌ಮಸ್ ಅನ್ನು ಭಾವೈಕ್ಯದಿಂದ ಆಚರಿಸಲು ನಿರ್ಧರಿಸಿದೆ. ಈ ಅಂಗವಾಗಿ ಒಕ್ಕೂಟವು ಕ್ರೈಸ್ತ ಸಮಾಜದ ಬಡವರಿಗೆ ಬಟ್ಟೆ ಹಾಗೂ ಆಹಾರ ಧಾನ್ಯ ವಿತರಿಸಲಿದೆ.

ನೆರವು ಪಡೆಯಬಯಸುವವರು ತಮ್ಮ ಧರ್ಮಗುರುಗಳಿಂದ ಶಿಫಾರಸು ಪತ್ರ ಪಡೆದಿರಬೇಕು. ಆಸಕ್ತರು ಇದೇ 15ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ADVERTISEMENT

ಮಾಹಿತಿಗೆ ನಾಗಲು ದೇವದಾನಂ, ಚೇತನಾ ಕಾಲೊನಿ-1, ಪ್ಲಾಟ್ ಸಂಖ್ಯೆ 88, ಗದಗ ರಸ್ತೆ, ಹುಬ್ಬಳ್ಳಿ. ಮೊಬೈಲ್ ಸಂಖ್ಯೆ 9900428775 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.