ADVERTISEMENT

ಧರ್ಮಸೂಕ್ಷ್ಮ ಅರಿತು ನಡೆಯಿರಿ:ರೇವಣಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:34 IST
Last Updated 4 ಏಪ್ರಿಲ್ 2013, 6:34 IST

ಕಲಘಟಗಿ:  ವೀರಶೈವ ಮಹಾಮತದ ಸಂಸ್ಥಾಪಕರಾದ ರೇಣುಕಾಚಾರ್ಯರು ತಿಳಿಸಿದ ಧರ್ಮಸೂಕ್ಷ್ಮಗಳನ್ನು ಅರಿತು ಅಳವಡಿಸಿಕೊಳ್ಳಲು ಯತ್ನಿಸಬೇಕು ಎಂದು ಪಟ್ಟಣದ ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯರು ತಿಳಿಸಿದರು.

ಅವರು ತಾಲ್ಲೂಕಿನ ಹಿರೇಹೊನ್ನಿಹಳ್ಳಿಯಲ್ಲಿ ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಣೆಯ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ರೇಣುಕರು ಧರ್ಮದ ಆಚರಣೆಯ ಹಂತದಲ್ಲಿ, ಪಂಚಾಚಾರ್ಯ, ಅಷ್ಠಾವರಣ, ಷಟಸ್ಥಲಗಳ ಕುರಿತು ತಮ್ಮ ಸಿದ್ದಾಂತ ಶಿಖಾಮಣಿಯಲ್ಲಿ ತಿಳಿಸಿದ್ದಾರೆ. ಈ ತತ್ವ ಸಿದ್ದಾಂತವನ್ನು ನಾವೆಲ್ಲರೂ ಅಳವಡಿಸಿಕೊಳ್ಳುವತ್ತ ಮನಸ್ಸು ಮಾಡಬೇಕಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಜಂಗಮ ಕ್ಷೇಮಾಭಿವದ್ಧಿ ಮಹಾಸಭಾದ ರಾಜ್ಯ ಯುವಘಟಕದ ಅದ್ಯಕ್ಷ ಬಂಗಾರೇಶ ಹಿರೇಮಠ ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವೆಂದು ಘೋಷಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ಮಹಾಸಂಕಲ್ಪ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮ ಗಳು ಜರುಗಿದವು.  ಸ್ಥಳೀಯ ಜಂಗಮ ಅಭಿವದ್ಧಿ ಸಂಘದ ವೈದಿಕರಿಂದ ವೇದ ಘೋಷ ದೊಂದಿಗೆ ಕಾರ್ಯಕ್ರಮ ನೆರವೇರಿತು. ರುದ್ರಮುನಿ ಸ್ವಾಮಿಗಳು, ಗುರುಪಾದಯ್ಯ, ಬಸಯ್ಯ ಹಿರೇಮ, ಚನ್ನಬಸಯ್ಯ ಚಿಕ್ಕಮಠ, ವೀರಭದ್ರಯ್ಯ ಹಿರೇಮಠ, ವೇದ ಘೋಷವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ವೈ ಬಿ ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ  ಬಸವಣ್ಣೆಯ್ಯ ಹಿರೇಮಠ, ಎಸ್.ವ್ಹಿ. ತಡಸಮಠ, ದುಂಡಯ್ಯಸ್ವಾಮಿ, ಮಂಜುನಾಥ ಲೂತಿಮಠ, ಕುಮಾರಸ್ವಾಮಿ ಹಿರೇಮಠ,.ಜಗದೀಶ ಹಂದಿಗೋಳ, ಶಿವಕಲ್ಲಪ್ಪ ಗಬ್ಬೂರ, ಪ್ರಭು ಕಿಚಡಿ, ವಿರುಪಾಕ್ಷ್ಯ ಪೂಜಾರ, ಹಾಲಯ್ಯ ಹಿರೇಮಠ, ಗಿರಿಮಲ್ಲಯ್ಯೊ ಕಂಬಿ. ಬಸಯ್ಯ ಸಾಲಿಮಠ, ಬಸಯ್ಯ ಗೋಕಾಕ, ಬಸಯ್ಯ  ದೊಡ್ಡಪೂಜಾರ, ಮಲ್ಲಯ್ಯ ಕಂಬಿ, ದಯಾನಂದ ಹಿರೆಮಠ, ಬಸಯ್ಯ. ಚಿಕ್ಕಮಠ , ರಾಚಯ್ಯ ಪೂಜಾರ, ನಾಗಯ್ಯ ಪೂಜಾರ, ಗುಳಯ್ಯ ಪೂಜಾರ,ಗುರುಸಿದ್ದಪ ಬಡಿಗೇರ, ಷಣ್ಮುಕಪ್ಪ  ಬಡಿಗೇರ, ವಾಯ್. ಬಿ.ಜಮ್ಮಿಹಾಳ ಬಸಯ್ಯ ಕಂದಿ,್ಲ ಗಂಗಾಧರ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀರುದ್ರಮುನಿ ಸ್ವಾಮೀಜಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಸಿದ್ಧ  ಬಡಿಗೇರ  ರ್ಕಾುಕ್ರಮ ನಿರೂಪಿಸಿದರು, ಬಸಯ್ಯ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.