ADVERTISEMENT

ನ್ಯೂ ಇಂಗ್ಲಿಷ್ ಶಾಲೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 6:46 IST
Last Updated 17 ಜೂನ್ 2013, 6:46 IST

ಹುಬ್ಬಳ್ಳಿ: ಕಳೆದ ಅನೇಕ ವರ್ಷಗಳಿಂದ ಸರ್ಕಾರದಿಂದ ಅನುದಾನ ಪಡೆದು ನಡೆಯುತ್ತಿರುವ ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯನ್ನು ಆಡಳಿತ ಮಂಡಳಿ ಅನುದಾನರಹಿತ ಶಾಲೆಯ ನ್ನಾಗಿ ಪರಿವರ್ತಿಸಲು ಹುನ್ನಾರ ನಡೆಸು ತ್ತಿದೆ ಎಂದು ಆರೋಪಿಸಿ ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶಾಲೆಯ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಅನುದಾನಿತ ನ್ಯೂ ಇಂಗ್ಲಿಷ್ ಶಾಲೆಯನ್ನು ಅನುದಾನರಹಿತ ಶಾಲೆ ಯನ್ನಾಗಿ ಪರಿವರ್ತಿಸಲು ವಾಣಿಜ್ಯ ಸಂಸ್ಥೆಯನ್ನಾಗಿ ಮಾಡಲು ಯತ್ನ ನಡೆಯುತ್ತಿದೆ. ಅನುದಾನರಹಿತ ಶಾಲೆ ಯನ್ನಾಗಿ ಪರಿವರ್ತಿಸುತ್ತಿರುವುದರಿಂದ ಸುತ್ತಮುತ್ತಲಿನ  ಮಕ್ಕಳಿಗೆ ತೊಂದರೆ ಆಗಲಿದೆ ಎಂದು ಸಮಿತಿಯ ಸದಸ್ಯರು ಆರೋಪಿಸಿದರು.

`ಈ ಯತ್ನದ ಹಿಂದೆ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಯ ದುರಾಡಳಿತ ಹಾಗೂ ಹಣ ಮಾಡುವ ಉದ್ದೇಶ ಕಂಡುಬರುತ್ತಿದೆ. ಹೀಗಾಗಿ ಅವರನ್ನು ತಕ್ಷಣ ಆ ಸ್ಥಾನದಿಂದ ಉಚ್ಚಾಟಿಸಬೇಕು.

ಇಲ್ಲಿ 5ರಿಂದ 10ನೇ ತರಗತಿವರೆಗೆ ಅನುದಾ ನಿತ ಶಾಲೆಯ ಇರುವ ಮಧ್ಯೆಯೇ 5ರಿಂದ 7ನೇ ತರಗತಿವರೆಗೆ ಅನುದಾನ ರಹಿತ ಶಾಲೆಯಲ್ಲಿ ಆರಂಭಿಸಿರುವು ದನ್ನು ಸ್ಥಗಿತಗೊಳಿಸಬೇಕು' ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಗಂಗಾಧರ ಪೇರೂರ, ಲೋಕೇಶ ಪಾಲೀಮ, ಪರಶುರಾಮ ಯಾಲೆಟ್ಟಿ, ಜಾವೀದ್ ತೋರಗಲ್, ಪರಶುರಾಮ ನಂದಿಹಾಳ, ರವಿ ಶಾಬಾದ ಮತ್ತಿ ತರರು ಪ್ರತಿಭಟನೆಯಲ್ಲಿ ಭಾಗವ ಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.