ADVERTISEMENT

ಪ್ರಚಾರ: ಹಳ್ಳಿಗಳತ್ತ ಅಭ್ಯರ್ಥಿಗಳ ಚಿತ್ತ

​ಪ್ರಜಾವಾಣಿ ವಾರ್ತೆ
Published 7 ಮೇ 2018, 9:52 IST
Last Updated 7 ಮೇ 2018, 9:52 IST

ನವಲಗುಂದ: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಶನಿವಾರ ರೋಡ್ ಷೋ ಮೂಲಕ ಮತಯಾಚಿಸಿದರು.

‘ನಿರೀಕ್ಷೆಯಂತೆ ಬಿಜೆಪಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮೂರು ವರ್ಷದ ಹಿಂದೆಯೇ ಜೆಡಿಎಸ್ ಘೋಷಿಸಿದೆ. ಬಿಜೆಪಿಯವರಿಗೆ ಈಗ ಎಚ್ಚರಿಕೆಯಾಗಿದೆ’ ಎಂದು ಕೋನರಡ್ಡಿ ಲೇವಡಿ ಮಾಡಿದರು.

‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ₹ 52 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗುವುದು’ ಎಂಂದರು.

ADVERTISEMENT

ಹುಬ್ಬಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಮುಖಂಡರಾದ ವೀರಣ್ಣ ನೀರಲಗಿ, ಎಂ.ಎಸ್.ರೋಣದ, ಶಿವಪುತ್ರಯ್ಯ ಹೊಸಮಠ, ಮಲ್ಲಪ್ಪ ಅಣ್ಣಿಗೇರಿ, ಚನ್ನಬಸಪ್ಪ ನೆಲಗುಡ್ಡ, ಯಲ್ಲನಗೌಡ ಕಾಶಪ್ಪಗೌಡರ, ಶರಣು ದೊಡ್ಡಲಿಂಗನಗೌಡರ, ಬಸನಗೌಡ ಕಾಶಪ್ಪಗೌಡರ, ಗುರುನಗೌಡ ಇದ್ದರು.

ಮುನೇನಕೊಪ್ಪ ಪ್ರಚಾರ

ಅಣ್ಣಿಗೇರಿ: ನವಲಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಶನಿವಾರ ಪಟ್ಟಣದಲ್ಲಿ ಮತಯಾಚನೆ ಮಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೇರಿಕೊಂಡು ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಬಿಜೆಪಿಗೆ ಮತ ಹಾಕಬೇಕು’ ಎಂದರು.

ಜೆಡಿಎಸ್ ಅಣ್ಣಿಗೇರಿ ನಗರ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಹನಮಂತಪ್ಪ ಛಲವಾದಿ ಅವರಿಗೆ ಮುನೇನಕೊಪ್ಪ ಹಸ್ತಲಾಘವ ಮಾಡಿ ಮತಯಾಚಿಸಿದ್ದು ಗಮನ ಸೆಳೆಯಿತು. ಬಿಜೆಪಿ ಮುಖಂಡರಾದ ಷಣ್ಮುಖ ಗುರಿಕಾರ, ಮುತ್ತು ನಾಗಾವಿಮಠ, ಶಂಕರಣ್ಣ ಯಾದವಾಡ, ರಾಜು ಹಳ್ಳಿಕೇರಿ ಇದ್ದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಲಾಡ್

ಅಳ್ನಾವರ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ವಿಶ್ವಾಸವ್ಯಕ್ತಪಡಿಸಿದರು.

ಅಳ್ನಾವರ ವ್ಯಾಪ್ತಿಯ ಬೆಣಚಿ, ಹೂಲಿಕೇರಿ, ಕಡಬಗಟ್ಟಿ, ಕಾಶೇನಟ್ಟಿ, ಕೋಗಿಲಗೇರಿ, ಕುಂಬಾರಕೊಪ್ಪ, ಅರವಟಗಿ, ಅಂಬೊಳ್ಳಿ ಗ್ರಾಮಗಳಲ್ಲಿ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದ ಬಳಿಕ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ್, ಸೋಮನಗೌಡ ಕರಿಗೌಡರ, ಅನ್ವರ್‌ಖಾನ್‌ ಬಾಗೇವಾಡಿ, ಮಧು ಬಡಸ್ಕರ, ಶಿವಾನಂದ ಹೊಸಕೇರಿ, ಸುರೇಶ ಪಾಟೀಲ, ರಘು ಹರಿಜನ, ಮುರಗೇಶ ಇನಾಮದಾರ್‌, ಶಿವಾಜಿ ಕಿತ್ತೂರ, ನೂರ್‌ಅಹ್ಮದ್ ಕಿತ್ತೂರ, ರಾಯಪ್ಪ ಹುಡೇದ, ಅಶೋಕ ಜೋಡಟ್ಟಿ, ಮಲ್ಲಪ್ಪ ಗಾಣಿಗೇರ, ಬಸವರಾಜ ಗುಂಡಗೋವಿ, ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಮಿನಾಬೇಗಂ ನದಾಫ್, ಕಲ್ಮೇಶ ಬಡಿಗೇರ, ಪರಶುರಾಮ ಬೇಕನೇಕರ, ಕಿರಣ ಗಡಕರ, ಛಗನಲಾಲ್‌ ಪಟೇಲ್‌, ತಮೀಮ್ ತೇರಗಾಂವ, ಸಾಜಿದ್ ಅವರಾದಿ, ಮಹಾದೇವ ಗೋದಗೇರಿಕರ ಇದ್ದರು.

ಮನೆ ಮಗನೆಂದು ಆಶೀರ್ವದಿಸಿ: ಅಸೂಟಿ

ನವಲಗುಂದ: ನನ್ನನ್ನು ನಿಮ್ಮ ಮನೆ ಮಗನೆಂದು ತಿಳಿದು ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮನವಿ ಮಾಡಿದರು.

ತಾಲ್ಲೂಕಿನ ಗೊಬ್ಬರಗುಂಪಿ, ಬೆಳವಟಗಿ, ಅಮರಗೋಳ ಗ್ರಾಮಗಳಲ್ಲಿ  ಕಾರ್ಯಕರ್ತರೊಂದಿಗೆ ಭಾನುವಾರ ಮನೆ ಮನೆಗೆ ತೆರಳಿ ಮತಯಾಚನೆ ಅವರು ಮಾತನಾಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತವ್ವ ಗುಜ್ಜಳ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ, ಪ್ರೇಮಾ ನಾಯ್ಕರ್, ಸದುಗೌಡ ಪಾಟೀಲ, ಶಂಕರಗೌಡ ಮರಿಗೌಡರ, ಭೀರಪ್ಪ ಹೆಬ್ಬಾಳ, ರಾಮಣ್ಣ ಪೂಜಾರಿ, ಪ್ರಭು ಭೀರಣ್ಣವರ, ಭೀರಪ್ಪ ಕೊಳಲಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.