ADVERTISEMENT

ಬನಶಂಕರಿ ದೇವಿಗೆ ಸಹಸ್ರ ಕುಂಕುಮಾರ್ಚನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:00 IST
Last Updated 7 ಫೆಬ್ರುವರಿ 2012, 8:00 IST

ಹುಬ್ಬಳ್ಳಿ: ಬನಶಂಕರಿ ದೇವಿಯ ಸಹಸ್ರ ನಾಮಾವಳಿಗೆ ಅನುಗುಣವಾಗಿ ಅಲ್ಲಿ ನೆರೆದಿದ್ದ 500 ಮಹಿಳೆಯರು ತಮ್ಮ ಮುಂದಿದ್ದ ದೇವಿಯ ಭಾವ ಚಿತ್ರಕ್ಕೆ ಕುಂಕುಮಾರ್ಚನೆಗೈದರು. ಇದು ವಿದ್ಯಾನಗರದ ಬನಶಂಕರಿ ಬಡಾವಣೆ ಯಲ್ಲಿ ಬನಶಂಕರಿ ಪ್ರತಿಷ್ಠಾಪನೆ ಯ 15ನೇ ವಾರ್ಷಿಕೋತ್ಸವ ಹಾಗೂ 12ನೇ ಮಹಾ ರಥೋತ್ಸವ ಅಂಗವಾಗಿ ಸೋಮವಾರ ಬೆಳಿಗ್ಗೆ ನಡೆದ ಧಾರ್ಮಿಕ ಆಚರಣೆ.

ಬನಶಂಕರಿ ದೇವಸ್ಥಾನ ಟ್ರಸ್ಟ್ ಸಮಿತಿ ಹಾಗೂ ಬನಶಂಕರಿ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ ನಡೆದ  ಕುಂಕುಮಾರ್ಚನೆಯಲ್ಲಿ 500 ಮಹಿಳೆಯರು ಪಾಲ್ಗೊಂಡಿದ್ದರು. ಇದರ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ಕರ್ಮವಿದ್ದಲ್ಲಿ ಸದಾ ಫಲ ಇರುತ್ತದೆ. ಫಲದಲ್ಲಿ ಎರಡು ಬಗೆ. ಒಂದು ದೃಷ್ಟ ಫಲ. ಇನ್ನೊಂದು ಅದೃಷ್ಟ ಫಲ ಎಂದರು. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಭಕ್ತಾದಿಗಳು ತಮ್ಮ ಅಲ್ಪ ಆಯುಷ್ಯದಲ್ಲಿ ಪುಣ್ಯ ಗಳಿಸಿಕೊಳ್ಳಬೇಕು ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಆನಂದ ಕವರಿ, ಬಡವಾಣೆ ನಿವಾಸಿಗಳ ಸಂಘದ ಅಧ್ಯಕ್ಷ ರಾಜಾರೆಡ್ಡಿ, ತುಕಾ ರಾಮ ಚಿಟ್ಪಾ, ವಿ.ಬಿ. ಕುರ್ತಕೋಟಿ, ಟಿ.ಡಿ. ನಾಯಕ, ಜಿ.ಸಿ. ಕೋರಿಶೆಟ್ಟರ, ಎನ್.ಸಿ. ಬಣಕಾರ, ಎಂ.ಎಸ್. ಕುಮಸಿ, ವಿ.ಎಸ್. ಪಾಟೀಲ, ಅಜಿತ್ ರೋಖಡೆ ಹಾಗೂ ಡಿ.ಎಸ್. ಕರಿಎತ್ತಿನ ಹಾಜ ರಿದ್ದರು. ದಾನಿಗಳಾದ ಆನಂದ ಕವರಿ, ನಾಯಕ, ವಿಜ ಯಾ ಪಾಟೀಲ, ಮನೋಹರ ರೋಣದ, ಉದಯ, ಮಹಾದೇವ ಇಜಂತಕರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್. ಎಸ್. ಶಂಕರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.

ಇದಕ್ಕೂ ಮೊದಲು ಬೆಳಿಗ್ಗೆ ರುದ್ರಾಭಿಷೇಕ, ಚಂಡಿ ಪಾರಾಯಣ, ಗಣಪತಿ, ರುದ್ರ, ಸೂರ್ಯ ಹಾಗೂ ವಿಷ್ಣು ಹೋಮ ನಡೆದವು. ಸಂಜೆ ಶಾಕಾಂಬರಿ ಮಹಿಳಾ ಮಂಡಳ ಹಾಗೂ ಇತರ ಮಹಿಳಾ ಮಂಡಳಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಿದವು.

ಇಂದು ಕುಂಕುಮಾರ್ಚನೆ: `ಸೋಮವಾರ ನಡೆದ ಸಹಸ್ರ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳದವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕುಂಕುಮಾರ್ಚನೆಯಲ್ಲಿ ಭಾಗವಹಿಸ ಬಹುದು. ಸಂಜೆ 5.30 ಗಂಟೆಗೆ ರಥೋತ್ಸವ ನಡೆಯಲಿದೆ~ ಎಂದು ಟ್ರಸ್ಟ್ ಸಮಿತಿ ಪರವಾಗಿ ಎಸ್.ಎಸ್. ಶಂಕರ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.