ADVERTISEMENT

ಬಿರುಸುಗೊಂಡ ಚುನಾವಣಾ ಪ್ರಚಾರ

ನೃಪತುಂಗಬೆಟ್ಟ, ಇಂದಿರಾ ಗ್ಲಾಸ್‌ಹೌಸ್‌, ಗಾಲ್ಫ್‌ಕ್ಲಬ್‌ನಲ್ಲಿ ವಾಯು ವಿಹಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:52 IST
Last Updated 23 ಏಪ್ರಿಲ್ 2018, 8:52 IST
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಭಾನುವಾರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಭಾನುವಾರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು   

ಹುಬ್ಬಳ್ಳಿ: ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಜಿಲ್ಲೆಯಲ್ಲಿ ಭಾನುವಾರ ಬಿರುಸಾಗಿತ್ತು. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ ಸಲ್ಲಿಸಲಿರುವ ಅಭ್ಯರ್ಥಿಗಳು ಕೂಡ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮನೆ,ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿ, ಮತಯಾಚನೆ ಮಾಡಿದರು.

ರಾಜಣ್ಣ ಕೊರವಿ: ನಗರದ ಕಿತ್ತೂರ ಚನ್ನಮ್ಮ ವೃತ್ತದ ಬಳಿ ಇರುವ ಬಾಸೆಲ್ ಮಿಶನ್ ಚರ್ಚ್‌ಗೆ ಭಾನುವಾರ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ, ಚರ್ಚಿನ ಧರ್ಮಗುರು ಹಾಗೂ ಕ್ರಿಶ್ಚಿಯನ್ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮತಯಾಚನೆ ಮಾಡಿದರು.

ಗೋಪಾಲ ಕುಲಕರ್ಣಿ: ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ತಮ್ಮ ಬೆಂಬಲಿಗರೊಂದಿಗೆ ನಗರದ ನೃಪತುಂಗ ಬೆಟ್ಟದಲ್ಲಿ ಬೆಳಿಗ್ಗೆ ವಾಯು ವಿಹಾರಿಗಳಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಪ್ರಚಾರ ನಡೆಸಿದರು.

ADVERTISEMENT

ನಾಲವಾಡ ಪರ ಪ್ರಚಾರ: ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಹೇಶ ನಾಲವಾಡ, ಪೂರ್ವ ಕ್ಷೇತ್ರದ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಮತ್ತು ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರ ಪರ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್‌ ಉಳ್ಳಾಗಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ನೃಪತುಂಗ ಬೆಟ್ಟ, ಇಂದಿರಾ ಗ್ಲಾಸ್‌ಹೌಸ್‌ ಮತ್ತು ಗಾಲ್ಫ್‌ ಕ್ಲಬ್‌ನಲ್ಲಿ ವಾಯು ವಿಹಾರಿಗಳನ್ನು ಭೇಟಿ ಮಾಡಿ, ಮತಯಾಚಿಸಿದರು.

ಮುಖಂಡರಾದ ಬಂಗಾರೇಶ ಹಿರೇಮಠ, ಶಹಜಮಾನ್‌ ಮುಜಾಹಿದ್‌, ರಾಜೀವ್‌ ಲದ್ವಾ, ರೋಹಿತ್‌ ಮೆಹ್ತಾ, ಶ್ರೀನಿವಾಸ ಮುರುಗೋಡ, ಸುನೀಲ್‌ ಮರಾಠೆ ಇದ್ದರು.

ಪ್ರಸಾದ ಅಬ್ಬಯ್ಯ: ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅವರು ಸದಾಶಿವ ನಗರ, ಶ್ರೀರಾಮ ನಗರ ಭಾಗದಲ್ಲಿ ಪ್ರಚಾರ ನಡೆಸಿದರು.

ನಗರದ ಬಾಣತಿಕಟ್ಟಿ ವೃತ್ತದಿಂದ ಪ್ರಾರಂಭವಾದ ಪ್ರಚಾರ ಯಾತ್ರೆ, ಮಾರುತಿ ನಗರ, ಶರಾವತಿ ನಗರ, ಪೋಳ ಲ್ಯಾಂಡ್, ನೂರಾನಿ ಪ್ಲಾಟ್, ಲಕ್ಷ್ಮಿ ಕಾಲೊನಿ, ಗುರುಸಿದ್ದೇಶ್ವರ ನಗರ, ಸಂತೋಷ ನಗರ, ಬೇಪಾರಿ ಪ್ಲಾಟ್, ದುರ್ಗಾಶಕ್ತಿ ಕಾಲೊನಿಯಲ್ಲಿ ಪ್ರಚಾರ ನಡೆಸಿದರು.

‘25 ವರ್ಷಗಳಿಂದ ಆಗದೆ ಇದ್ದ ಅನೇಕ ಕೆಲಸಗಳನ್ನು ಕೇವಲ 5 ವರ್ಷದಲ್ಲಿ ಮಾಡಿರುವುದರಿಂದ ಕ್ಷೇತ್ರದ ಚಿತ್ರಣವೇ
ಬದಲಾಗಿದೆ. ಇನ್ನಷ್ಟು ಕೆಲಸ ಕಾರ್ಯಗಳಿಗಾಗಿ ಮತ್ತೊಮ್ಮೆ ಹರಸಿ-ಆಶೀರ್ವದಿಸಬೇಕು’ ಎಂದು ಮತದಾರರ ಬಳಿ ಮನವಿ ಮಾಡಿದರು.

ಪಾಲಿಕೆ ಸದಸ್ಯ ನಜೀರ್ ಹೊನ್ಯಾಳ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುನೀತಾ ಹುರಕಡ್ಲಿ, ಮುಖಂಡರಾದ ರಫೀಕ್ ದರ್ಗಾದ, ಧರ್ಮರಾಜ ಸಾತಪತಿ, ಶಾರುಖ್ ಮುಲ್ಲಾ, ಮುಸ್ತಾಕ್ ಮುದುಗಲ್, ಶ್ರೀಕಾಂತ ಅರಕೇರಿ, ಬಸಪ್ಪ ಮಾದರ, ನೀಲಪ್ಪ ಭಗವತಿ, ಶೇಖಣ್ಣ ಬೆಂಡಿಗೇರಿ, ಅಜ್ಜಪ್ಪ ಬೆಂಡಿಗೇರಿ, ಬಸವರಾಜ ಚಟ್ಲಿ, ಮೆಹಬೂಬ್, ಬಸವರಾಜ ಮೆಣಸಗಿ, ತುಷಾರ ಕವಳೇಕರ, ಗಣೇಶ ದೊಡ್ಡಮನಿ,ವೀರಣ್ಣ ಹಿರೇಹಾಳ, ಅಬ್ಬು ಬಿಜಾಪುರ, ಅಬ್ದುಲ್ ಖಾದರ್ ಕೋಳೂರು, ಶೋಭಾ ಕಮತರ, ಸೈಯದ್ ಸಲೀಂ, ಆಸೀಫ್ ಖಾತಿಬ್, ಶಿವು ಬೆಂಡಿಗೇರಿ, ಚೇತನಾ ಲಿಂಗದಾಳ ಇದ್ದರು.

ಬಿಜೆಪಿಗೆ ಸೇರ್ಪಡೆ: ಸೆಂಟ್ರಲ್ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಸಮ್ಮುಖದಲ್ಲಿ ಸಿಮೆಂಟ್‌ ಉದ್ಯಮಿಗಳಾದ ವೆಂಕಟರಮಣ ಚಿಟ್ಟಾ, ಗಿರಿಧರ, ಸಚಿನ್‌ ಅಥಣಿ, ಮಂಜುನಾಥ ಕಾಟಿಗರ, ಸೋಮನಾಥ ಇರಕಲ್‌ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಮುಖಂಡರಾದ ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಸಾವಕಾರ, ತೋಟಪ್ಪ ನಿಡಗುಂದಿ ಇದ್ದರು.

ಶೆಟ್ಟರ್‌, ವಿನಯ ನಾಮಪತ್ರ ಸಲ್ಲಿಕೆ ಇಂದು

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಜಗದೀಶ ಶೆಟ್ಟರ್‌, ಪೂರ್ವ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಮತ್ತು ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ ಸೋಮವಾರ (ಏ.23) ನಾಮಪತ್ರ ಸಲ್ಲಿಸಲಿದ್ದಾರೆ.ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಹೇಶ ನಾಲವಾಡ, ಕಲಘಟಗಿ ಕ್ಷೇತ್ರದ ಸಂತೋಷ ಲಾಡ್‌, ನವಲಗುಂದ ಕ್ಷೇತ್ರದ ವಿನೋದ ಅಸೂಟಿ ಮತ್ತು ಪಶ್ಚಿಮ ಕ್ಷೇತ್ರದಿಂದ ಇಸ್ಮಾಯಿಲ್‌ ತಮಟಗಾರ ಮಂಗಳವಾರ ಉಮೇದುವಾರಿಕೆ ಸಲ್ಲಿಸಿಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.ಸೆಂಟ್ರಲ್‌ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಜೆಡಿಯು ಅಭ್ಯರ್ಥಿ ಅನಂತಸಾ ನಾಯಕವಾಡಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.