ADVERTISEMENT

‘ಬಿಲ್ಡ್‌ಟೆಕ್‌’ ವಸ್ತು ಪ್ರದರ್ಶನಕ್ಕೆ ಚಾಲನೆ

ಒಟ್ಟು 110 ಮಳಿಗೆಗಳ ಸ್ಥಾಪನೆ; ಮನೆ ಕಟ್ಟಲು ಬೇಕಾದ ಸಾಮಗ್ರಿಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:37 IST
Last Updated 26 ಮೇ 2018, 10:37 IST
ಹುಬ್ಬಳ್ಳಿ ವಿದ್ಯಾನಗರದ ರಾಯ್ಕರ್‌ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ ‘ಬಿಲ್ಡ್‌ಟೆಕ್‌’ ಗೃಹ ನಿರ್ಮಾಣ ವಸ್ತುಪ್ರದರ್ಶನದಲ್ಲಿನ ವಿವಿಧ ವಸ್ತುಗಳನ್ನು ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ವೀಕ್ಷಿಸಿದರು
ಹುಬ್ಬಳ್ಳಿ ವಿದ್ಯಾನಗರದ ರಾಯ್ಕರ್‌ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ ‘ಬಿಲ್ಡ್‌ಟೆಕ್‌’ ಗೃಹ ನಿರ್ಮಾಣ ವಸ್ತುಪ್ರದರ್ಶನದಲ್ಲಿನ ವಿವಿಧ ವಸ್ತುಗಳನ್ನು ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ವೀಕ್ಷಿಸಿದರು   

ಹುಬ್ಬಳ್ಳಿ: ವಿದ್ಯಾನಗರದ ರಾಯ್ಕರ್ ಮೈದಾನದಲ್ಲಿ ಬೆಂಗಳೂರಿನ ಯು.ಎಸ್.ಕಮ್ಯುನಿಕೇಷನ್ ಹಮ್ಮಿಕೊಂಡಿರುವ ‘ಬಿಲ್ಡ್‌ಟೆಕ್-2018’ ವಸ್ತು ಪ್ರದರ್ಶನ ಶುಕ್ರವಾರ ಆರಂಭಗೊಂಡಿತು.

ಮೂರು ದಿನಗಳ ಕಾಲ ನಡೆಯಲಿರುವ ‘ಬಿಲ್ಡ್‌ಟೆಕ್‌’ಗೆ ಚಾಲನೆ ನೀಡಿದ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಗೃಹ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳನ್ನು ಒಂದೇ ಸೂರಿನಡಿ ಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಲ್ಡ್‌ಟೆಕ್ ವಸ್ತು ಪ್ರದರ್ಶನದ ಸಂಯೋಜಕ ಉಮಾಪತಿ, ವಸ್ತು ಪ್ರದರ್ಶನದಲ್ಲಿ 110 ಮಳಿಗೆಗಳಿವೆ. ಗೃಹ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳು ದೊರೆಯಲಿವೆ’ ಎಂದು ಹೇಳಿದರು.

ADVERTISEMENT

‘ಕಟ್ಟಡ ಸಾಮಗ್ರಿಗಳು, ಸಿಮೆಂಟ್, ಗ್ರಾನೈಟ್, ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಕಿಟಕಿ, ಗ್ಲಾಸ್, ಸೋಲಾರ್, ಇಂಟಿರಿಯರ್, ಎಲ್‌ಇಡಿ ಲೈಟ್ಸ್‌, ಪೀಠೋಪಕರಣ, ಮಾಡ್ಯೂಲರ್ ಕಿಚನ್, ಆಧುನಿಕ ಮತ್ತು ಆಕರ್ಷಕ ಹೆಂಚುಗಳು ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಹೇಳಿದರು.

ಗೃಹ ನಿರ್ಮಾಣ ವಸ್ತುಗಳ ತಯಾರಕರು ಮತ್ತು ಗ್ರಾಹಕರನ್ನು ಒಂದೇ ಸೂರಿನಡಿ ಬೆಸೆಯುವಂತೆ ಮಾಡುವ ಉದ್ದೇಶದಿಂದ ‘ಬಿಲ್ಡ್‌ಟೆಕ್‌’ ಅನ್ನು ಆಯೋಜಿಸಲಾಗಿದೆ. ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ರಾತ್ರಿ 8.30ರ ವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದು ಹೇಳಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡರ, ಕೆಸಿಸಿಐನ ಕಾರ್ಯದರ್ಶಿ ವಿನಯ ಜವಳಿ, ದೀಪಕ್‌ ಹಿರೇಮಠ, ಯು.ಎಸ್.ಕಮ್ಯುನಿಕೇಷನ್‌ನ ಮಾರ್ಕೆಟಿಂಗ್‌ ಮ್ಯಾನೇಜರ್‌ ಕಲ್ಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.