ADVERTISEMENT

ಬುಧವಾರ ಸಂತೆ: ರೋಗಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:22 IST
Last Updated 10 ಜುಲೈ 2013, 9:22 IST
ಕುಂದಗೋಳ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಕಾಯಿಪಲ್ಲೆ ಮಾರಾಟ ಮಾಡುವ ಜಾಗದಲ್ಲೇ ತೆರೆದ ಚರಂಡಿ ಹರಿಯುತ್ತಿದೆ
ಕುಂದಗೋಳ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಕಾಯಿಪಲ್ಲೆ ಮಾರಾಟ ಮಾಡುವ ಜಾಗದಲ್ಲೇ ತೆರೆದ ಚರಂಡಿ ಹರಿಯುತ್ತಿದೆ   

ಕುಂದಗೋಳ: ಹೋಟೆಲ್ ಮತ್ತು ಮಾಂಸದ ಅಂಗಡಿಯ ಕಲ್ಮಶ ನೇರವಾಗಿ ಚರಂಡಿ ಸೇರುತ್ತದೆ. ಇದರಿಂದ ಮೊದಲೇ ಸ್ವಚಿತ್ವ ಕಾಣದ ಚರಂಡಿಗಳು ಇನ್ನಷ್ಟು ಕೆಟ್ಟ ವಾಸನೆ ಹೊರ ಸೂಸುತ್ತಿವೆ. ನಿತ್ಯವೂ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಅಧಿಕಾರಿಗಳು ಸಹ ಇದೇ ರಸ್ತೆಯನ್ನು ಬಳಸುತ್ತಾರೆ. ಆದರೂ ಈ ಅವ್ಯವಸ್ಥೆ ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸ. ಒಟ್ಟಾರೆ ಇಲ್ಲಿನ ಅವ್ಯವಸ್ಥೆಗೆ ಬ್ರಹ್ಮಲಿಂಗ ದೇವಸ್ಥಾನದ ಬಳಿಯಿರುವ ರಾಷ್ಟ್ರಪಿತ ಗಾಂಧೀಜಿ ಪ್ರತಿಮೆ ಪ್ರಮಾಣಪತ್ರ ನೀಡಲು ಸಿದ್ಧವಾಗಿದೆ!

ಇದರ ನಡುವೆ ಬುಧವಾರ ಸಂತೆ ನಡೆಯುತ್ತಿದೆ. ವ್ಯಾಪಾರಿಗಳು ಈ ಕೆಟ್ಟ ವಾತಾವರಣದಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಾರೆ. ಸಂತೆಯ ದಿನ ಜಾಗಕ್ಕಾಗಿ ವ್ಯಾಪಾರಿಗಳ ನಡುವೆ ಭಾರಿ ಪೈಪೋಟಿಯೇ ನಡೆಯುತ್ತದೆ. ಹಾವೇರಿ, ಶಿಗ್ಲಿ, ಲಕ್ಷ್ಮೇಶ್ವರ, ಹುಬ್ಬಳ್ಳಿ, ಕಮಡೊಳ್ಳಿ ಮುಂತಾದೆಡೆಗಳಿಂದ ಕಾಯಿಪಲ್ಲೆ ಹೊತ್ತು ತಂದು ವ್ಯಾಪಾರಿಗಳು ಇಲ್ಲಿ ಮಾರಾಟ ಮಾಡುತ್ತಾರೆ. ಬೇರೆ ದಾರಿಯಿಲ್ಲದೇ ಸಾರ್ವಜನಕರು ಇಲ್ಲಿ ತರಕಾರಿ ಕೊಳ್ಳುತ್ತಾರೆ.

ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮುಳ್ಳು ಕಂಟೆ, ಅಲ್ಲಲ್ಲಿ ಬಿಸಾಡಿರುವ ಟೈರ್‌ಗಳು, ಹರಿದುಹೋದ ಚಪ್ಪಲಿ ಹೀಗೆ ನಿರುಪಯುಕ್ತ ವಸ್ತುಗಳ ತಾಣವಾಗಿ ಇದು ಮಾರ್ಪಟ್ಟಿದೆ.

ಅವ್ಯವಸ್ಥೆಯ ಆಗರವಾಗಿರುವ ಇಲ್ಲಿನ ಪರಿಸ್ಥಿತಿ ಹಲವು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತದೆ. ಈಗಲಾದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ವ್ಯಾಪಾರರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.