ADVERTISEMENT

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 5:34 IST
Last Updated 5 ಫೆಬ್ರುವರಿ 2014, 5:34 IST
ನವಲಗುಂದದಲ್ಲಿ ಗ್ರಾಮೀಣ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು  ನೃತ್ಯಕ್ಕೆ ಹೆಜ್ಜೆ ಹಾಕಿದರು.
ನವಲಗುಂದದಲ್ಲಿ ಗ್ರಾಮೀಣ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯಕ್ಕೆ ಹೆಜ್ಜೆ ಹಾಕಿದರು.   

ನವಲಗುಂದ: ಇಲ್ಲಿಯ ಗ್ರಾಮೀಣ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ರಾಜೀವ್‌ಗಾಂಧಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪ್ರಿಯಾಂಕಾ ಪ.ಪೂ ಮಹಾವಿದ್ಯಾಲಯ ಹಾಗೂ ಲಾಲಬಹಾದ್ದೂರ್‌ಶಾಸ್ತ್ರೀ ಡಿ.ಇ.ಡಿ ಕಾಲೇಜಿನ  ವಾರ್ಷಿಕೋತ್ಸವ ಸಮಾ­ರಂಭದಲ್ಲಿ ವಿದ್ಯಾರ್ಥಿಗಳಿಂದ  ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನು ಮನಸೂರೆಗೊಳ್ಳುವಂತೆ ಮಾಡಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಪಾಲಕರು ಮಕ್ಕಳು ವೇದಿಕೆ ಮೇಲೆ ಸಾಮೂಹಿಕ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಕೇಕೆ ಹಾಕಿ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಎನ್.ಗಡ್ಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಸಂಗೀತಾ ಕಟ್ಟಿಮನಿ, ಯುವಜನ ಕ್ರೀಡಾ ಇಲಾಖೆಗೆ ಆಯ್ಕೆಯಾದ ಅಂಜಲಿ ವಡ್ಡರ, ಪ್ರವೀಣ ಕುರಹಟ್ಟಿ ಹಾಗೂ ನವೀನ ಕುರಹಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ವಾರ್ಷಿಕ ಕ್ರೀಡಾಕೂಟ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.

ಸಂಸ್ಥೆಯ ಗೌರವ ಕಾರ್ಯದರ್ಶಿ ಅನ್ನಪೂರ್ಣ ಗಡ್ಡಿ, ಶಿಕ್ಷಣ ಇಲಾಖೆಯ ಸಂಯೋಜಕರಾದ ಟಿ.ಟಿ.ದಾಸರ, ಪ.ಪೂ.­ಮಹಾವಿದ್ಯಾಲಯದ ಪ್ರಾಚಾ­ರ್ಯ ಎಸ್.ಎನ್.ಲಕ್ಕುಂಡಿ,  ಮುಖ್ಯಶಿಕ್ಷಕ ಎಫ್.ಎಫ್.­ಮದ್ರಾಸಿ, ಗಾಯತ್ರಿ ಬಡಿಗೇರ, ವಿ.ಬಿ.ನವಲಗುಂದ ಉಪಸ್ಥಿತರಿದ್ದರು. ಎಸ್.ಎಚ್.­ಜಟ್ಟೆನ್ನವರ ಸ್ವಾಗತಿಸಿದರು.  ರೇಷ್ಮಾ ದಲಬಂಜನ್ ನಿರೂಪಿಸಿದರು. ಜ್ಯೋತಿ ಸುಂಕದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.