ADVERTISEMENT

`ಯಕ್ಷಗಾನಕ್ಕೆ ಸಿಕ್ಕ ಪ್ರೋತ್ಸಾಹ ಬಯಲಾಟಕ್ಕಿಲ್ಲ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:42 IST
Last Updated 6 ಡಿಸೆಂಬರ್ 2012, 6:42 IST

ಧಾರವಾಡ: `ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರಕಾರ ಜನಪ್ರಿಯವಾಗಲು ಅಲ್ಲಿನ ಜನರ ನಿರಂತರ ಪ್ರೋತ್ಸಾಹವೂ ಮುಖ್ಯ. ಆದರೆ ಆ ಬಗೆಯ ಪ್ರೋತ್ಸಾಹ ಉತ್ತರ ಕರ್ನಾಟಕದ ಬಯಲಾಟ, ಸಣ್ಣಾಟ, ದೊಡ್ಡಾಟ, ಸೋಗು, ಪಾರಿಜಾತಕ್ಕೆ ಸಿಕ್ಕಿಲ್ಲ' ಎಂದು ಹಿರಿಯ ಸಾಹಿತಿ ಡಾ.ಬಾಳಣ್ಣ ಸೀಗಿಹಳ್ಳಿ ವಿಷಾದಿಸಿದರು.

ಇಲ್ಲಿಯ ಕಲ್ಯಾಣ ನಗರದ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಕರ್ನಾಟಕ ಸಂಘವು ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಯಾರಿಗಾದರೂ ಮದುವೆಯಾದರೆ ಅಥವಾ ಮಕ್ಕಳಾದರೆ ಅವರು ಕೆಲ ವರ್ಷ ಕಾಲ ಯಕ್ಷಗಾನ ತಂಡವನ್ನು ಪ್ರಾಯೋಜಿಸುವ ಇಲ್ಲವೇ ಪ್ರದರ್ಶನ ಏರ್ಪಡಿಸುವ ಘೋಷಣೆ ಮಾಡುತ್ತಾರೆ. ಡಾ.ಶಿವರಾಮ ಕಾರಂತ ಅವರಂತಹ ದಿಗ್ಗಜರು ದುಡಿದಿದ್ದರಿಂದ ಯಕ್ಷಗಾನ ವಿದೇಶಗಳಲ್ಲೂ ಪ್ರದರ್ಶನ ನೀಡುವಂತಾಯಿತು' ಎಂದರು.

ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕರಣ್ಣ ಮಾತನವರ ಹಾಗೂ ಭರತ್ ರೋಣ ಅವರನ್ನು ಅವರ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಪ್ರಾಚಾರ್ಯ ಡಾ.ಶಶಿಧರ ತೋಡಕರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT