ADVERTISEMENT

ರಾಜ್ಯ ಬಂಜಾರ ಸಮ್ಮೇಳನ ಯಶಸ್ಸಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:05 IST
Last Updated 6 ಫೆಬ್ರುವರಿ 2012, 6:05 IST
ರಾಜ್ಯ ಬಂಜಾರ ಸಮ್ಮೇಳನ ಯಶಸ್ಸಿಗೆ ಸಲಹೆ
ರಾಜ್ಯ ಬಂಜಾರ ಸಮ್ಮೇಳನ ಯಶಸ್ಸಿಗೆ ಸಲಹೆ   

ಹುಬ್ಬಳ್ಳಿ: ಇದೇ 19ರಂದು ನಗರದ ನೆಹರು ಮೈದಾನದಲ್ಲಿ ನಡೆಯಲಿರುವ ಬಂಜಾರ ಸಮಾಜದ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಬಂಜಾರ ಕುಲಗುರುಗಳ 273ನೇ ಜಯಂತಿಯನ್ನು ಯಶಸ್ವಿಗೊಳಿಸಲು ಸಮಾಜ ಬಾಂಧ ವರು ಎಲ್ಲ ರೀತಿಯಲ್ಲೂ ಶ್ರಮಿಸಬೇಕು ಎಂದು ಸಮಾಜದ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ  ಸಲಹೆ ನೀಡಿದರು.

ಸಮ್ಮೇಳನದ ಹಿನ್ನೆಲೆಯಲ್ಲಿ ಭಾನು ವಾರ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 
ಸಮ್ಮೇಳನದಲ್ಲಿ ಬಂಜಾರ ಸಮಾಜದ ಕಲೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಗಳನ್ನು ಉಳಿಸುವ ಕುರಿತ ಕಾರ್ಯಕ್ರಮ ಗಳು ನಡೆಯಲಿವೆ.
 
ಇದರಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯ್ಕ ಮಾತನಾಡಿ, ಸಮ್ಮೇಳನಕ್ಕೆ ಸಂಬಂಧಿಸಿ ಜಿಲ್ಲಾವಾರು ಸಮಿತಿ ರಚಿಸುವಂತೆ ಸೂಚಿಸಿದರು.

ಟ್ರಸ್ಟ್ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಕೊಪ್ಪಳದ ಭರತ್ ನಾಯ್ಕ, ರಾಯಚೂರಿನ ಜೂಲೆಪ್ಪ, ಬೆಳಗಾವಿ ಜಿಲ್ಲೆಯ ಸೋಮು ಪೂಜಾರ, ಹಾವೇರಿ ಯ ರಮೇಶ ನಾಯ್ಕ, ಕಾರವಾರದ ರತನ್ ಸಿಂಗ್, ಟಿ.ಎಲ್. ನಾಯ್ಕ, ಮೋತಿಲಾಲ್ ಭಾಗವಹಿಸಿದ್ದರು.

ಸ್ವಾಗತ ಸಮಿತಿಯ ಸುಭಾಷ್ ಗುಡಿಮನಿ, ಸೋಮಶೇಖರ ಕನ್ಮಡಿ, ಅಶೋಕ ರಾಠೋಡ. ಕೆ.ಆರ್. ರಾಠೋ ಡ, ಡಾ. ರವೀಂದ್ರ ಕುಮಾರನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.