ADVERTISEMENT

‘ಶಿಕ್ಷಣದ ಜತೆ ಶಿಸ್ತು ಅಗತ್ಯ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:30 IST
Last Updated 30 ಮಾರ್ಚ್ 2018, 9:30 IST

ಧಾರವಾಡ: ‘ಶಿಕ್ಷಣದ ಜತೆಗೆ ಶಿಸ್ತು, ಶ್ರದ್ಧೆ ಬೆಳೆಸಿಕೊಂಡು ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು’ಎಂದು ವೈಶುದೀಪ ಪ್ರತಿಷ್ಠಾನದ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎಸ್. ಹಳ್ಯಾಳ ಮಾತನಾಡಿ, ‘ನಮ್ಮ ಆರೋಗ್ಯಕ್ಕೆ ನಾವೇ ಹೊಣೆ. ಅಂತೆಯೇ ನಮ್ಮ ಭವಿಷ್ಯಕ್ಕೂ ನಾವೇ ಹೊಣೆ. ಮನಸ್ಸು ಎಲ್ಲದಕ್ಕೂ ಮೂಲವಾಗಿರುತ್ತದೆ. ಆದ್ದರಿಂದ, ಮನಸ್ಸನ್ನು ಹರಿಯಲು ಬಿಡದೆ ಹಿಡಿತದಲ್ಲಿಟ್ಟುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಮಹ್ಮದ್ ಇಜಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ವಿ. ಮನಗುಂಡಿ, ವಿಜಯಶ್ರೀ ಪಾಟೀಲ, ನಾಗಭೂಷಣ ಶಾಸ್ತ್ರಿ, ಡಾ. ಬಿ.ಎಸ್. ತಲ್ಲೂರ, ಡಾ. ಎ.ಆರ್. ಜಗತಾಪ, ಡಾ. ಉಮಾ ಪೂಜಾರ, ಸರೋಜಿನಿ ತಳ್ಳಿಹಾಳ, ಡಾ. ಜಿ.ಕೆ. ಬಡಿಗೇರ, ಸಂಗೀತಾ ಕಟ್ಟಿಮನಿ
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.