ADVERTISEMENT

ಸಮಯನಿಷ್ಠೆಯಲ್ಲಿ ರೈಲ್ವೆ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:20 IST
Last Updated 21 ಏಪ್ರಿಲ್ 2012, 5:20 IST

ಹುಬ್ಬಳ್ಳಿ: `ರೈಲುಗಳ ಓಡಾಟದಲ್ಲಿ ಸಮಯಪಾಲನೆಯನ್ನು ಕಾಯ್ದು ಕೊಳ್ಳುವ ವಿಷಯದಲ್ಲಿ ನೈರುತ್ಯ ರೈಲ್ವೆ ಉತ್ತಮ ಸಾಧನೆ ಮಾಡಿದೆ~ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಮಿತ್ತಲ್ ತಿಳಿಸಿದರು.

ರೈಲ್ವೆ ಆಫಿಸರ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

`2009-10ನೇ ಸಾಲಿನಲ್ಲಿ ಸಮಯಪಾಲನೆ ವಿಷಯದಲ್ಲಿ 83 ಶೇಕಡಾ ಸಾಧನೆ ಮಾಡಿದ್ದ ರೈಲ್ವೆ ಈ ವರ್ಷ ಅದನ್ನು 95 ಶೇಕಡಾಗೆ ಏರಿಸಿ ಕೊಂಡಿದೆ~ ಎಂದು ಸಮಿತಿಯ ಅಧ್ಯಕ್ಷರೂ ಆದ ಮಿತ್ತಲ್ ತಿಳಿಸಿದರು.

ಪ್ರಯಾಣಿಕರಿಗೆ ಅನುಕೂಲಗಳನ್ನು ಕಲ್ಪಿಸಿಕೊಡುವುದರಲ್ಲೂ ನೈರುತ್ಯ ರೈಲ್ವೆ ಮುಂದೆ ಇದ್ದು  ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ ಎಂದು ಹೇಳಿದರು.

 ಕಳೆದ ಬಾರಿಗಿಂತ ಈ ಬಾರಿ ಪ್ರಯಾಣಿಕರ ಸಂಖ್ಯೆಯಲ್ಲಿ 7.41 ಶೇಕಡಾದಷ್ಟು ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದರು.ಸರಕು ಸಾಗಣೆಯಲ್ಲೂ ಕಳೆದ ಬಾರಿಗಿಂತ 13.97 ಶೇಕಡಾ ಹೆಚ್ಚಳ ಕಂಡಿದೆ~ ಎಂದು ಅವರು ತಿಳಿಸಿದರು.

ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು ಪ್ರಮುಖ 11 ಸ್ಟೇಷನ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅಗತ್ಯವಿದ್ದಲ್ಲಿ ಲೋಹ ಶೋಧಕಗಳನ್ನು ಅಳವಡಿಸ ಲಾಗುವುದು. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರಲಾಗಿದೆ. 

ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಬೇಕಾದ ರೈಲ್ವೆ ಯೋಜನೆಗಳ ಬಗ್ಗೆ ಸಮಿತಿ ಸದಸ್ಯರು ಮಾತನಾಡಿದರು.

ಬಾಬುಲಾಲ್ ಜಿ. ಜೈನ್, ಶ್ರೀಶೈಲಪ್ಪ ಬಿದರೂರು, ಶಶಾಂಕ ಗೌಡ ಪಾಟೀಲ, ನಾರಾಯಣಸ್ವಾಮಿ, ಸುರೇಶ ನಾಯ್ಡು, ಡಿ.ಕಿಶೋರ ಕುಮಾರ, ಜಿ.ನಾಗರಾಜ ರಾವ್, ವೈ.ಆರ್. ಬೆಳಗಲಿ, ಅಶೋಕ ಜೀರೆ, ಟಿ. ಸೂರಜ್‌ಮಲ್ ಜೈನ್, ಜಿ.ಕೆ. ಆದಪ್ಪಗೌಡರ, ಜೆ.ಆರ್. ಬಂಗೇರ, ದಾಮೋದರದಾಸ ಆರ್ ರಥಿ, ಗಂಗಾರಾಮ್ ಎಸ್.ಮೊರಾಜ್‌ಕರ್, ನಾಗೇಶ್ವರರಾವ್, ವಿಜಯ ಕುಮಾರ ಮತ್ತಿತತರು ಭಾಗವಹಿಸಿದ್ದರು. ರೈಲ್ವೆ ಅಧಿಕಾರಿಗಳಾದ ಜಿ.ಕೆ. ಜಲಾನ್, ಎಸ್.ಎಸ್. ನಾರಾಯಣನ್, ವಶಿಷ್ಟ ಜೊಹರಿ, ಎನ್.ಸಿ. ಸಿನ್ಹಾ, ಎ.ಕೆ. ಬ್ರಹ್ಮೋ ಮತ್ತಿತರರು ಈ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.