ADVERTISEMENT

ಸರ್ಕಾರಕ್ಕೆ ಪಾಲಿಕೆಯಿಂದ ತಪ್ಪುಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 5:55 IST
Last Updated 6 ಫೆಬ್ರುವರಿ 2012, 5:55 IST

ಹುಬ್ಬಳ್ಳಿ: `ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಹೊಸೂರಿನ ಮಾರುಕಟ್ಟೆ ಸಂಕೀರ್ಣ ದಲ್ಲಿರುವ ತಮ್ಮ ಆಸ್ಪತ್ರೆಗೆ ನೀಡಿದ್ದ 40 ಮಳಿಗೆಗಳನ್ನು ಮಹಾ ನಗರಪಾಲಿಕೆ ವಶಕ್ಕೆ ತೆಗೆದುಕೊಂಡಿದೆ~ ಎಂದು ಹಿರಿಯ ವೈದ್ಯ ಎಚ್.ಟಿ. ಗಂಗಲ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

`ಆಸ್ಪತ್ರೆಯಿಂದ ಬರಬೇಕಾದ 63 ಲಕ್ಷ ರೂಪಾಯಿಗೂ ಹೆಚ್ಚಿನ ಬಾಡಿಗೆ ಬಾಕಿಯನ್ನು ಸಂದಾಯವಾಗಲಿಲ್ಲ ಎಂದು ಆರೋಪಿಸಿ ಇದೇ 2ರಂದು ಸರ್ಕಾರದ ಆದೇಶದ ಪ್ರಕಾರ ಪಾಲಿಕೆ ಅಧಿಕಾರಿಗಳು ಆಸ್ಪತ್ರೆಗೆ ಸೇರಿದ ಮಳಿಗೆಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ದುರುದ್ದೇಶದಿಂದ ಸಂಚು ರೂಪಿಸಲಾಗಿದೆ~ ಎಂದು 1978ರಲ್ಲಿ ರಾಷ್ಟ್ರಪತಿಗಳ ವೈದ್ಯಾಧಿಕಾರಿಯಾಗಿದ್ದ ಡಾ. ಗಂಗಲ್ ದೂರಿದರು.

`ಹೊಸೂರಿನಲ್ಲಿರುವ ಮಾರುಕಟ್ಟೆ ಸಂಕೀರ್ಣದ ಬಹುತೇಕ ಭಾಗವನ್ನು 1970ರಲ್ಲಿ ನನಗೆ ಬಾಡಿಗೆಗೆ ನೀಡಲಾ ಗಿತ್ತು. ಇತರ ಕಡೆಗಳಿಗಿಂತ ಸುಮಾರು 25 ಶೇಕಡಾ ಹೆಚ್ಚು ಬಾಡಿಗೆಯನ್ನು ಅಂದು ನಿಗದಿ ಮಾಡಲಾಗಿತ್ತು. ಬಾಡಿಗೆ ಕರಾರಿನ ಪ್ರಕಾರ ಪಾಲಿಕೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಆಸ್ಪತ್ರೆಯೊಂದನ್ನು ನಡೆಸಲು ಬೇಕಾದ ವಾತಾವರಣ ನಿರ್ಮಾಣ ಮಾಡಬೇಕಾ ಗಿತ್ತು. ಅದರೆ ಇದ್ಯಾವುದಕ್ಕೂ ಪಾಲಿಕೆ ಮುಂದಾಗಲಿಲ್ಲ~ ಎಂದು ಅವರು ದೂರಿದರು.

`ಕರಾರಿನ ನಿಯಮಗಳನ್ನೇ ಪಾಲಿಸ ದಿರುವ ಪಾಲಿಕೆ ಅಧಿಕಾರಿಗಳು ಆಸ್ಪತ್ರೆಯನ್ನು ಸುಸೂತ್ರವಾಗಿ ನಡೆಸಲು ಬಿಡದೆ ಅಕ್ರಮವಾಗಿ ಒಳ ಪ್ರವೇಶಿ ಸಿದ್ದಾರೆ. ಇಷ್ಟು ಮಾತ್ರವಲ್ಲದೆ ಆಸ್ಪತ್ರೆ ಯ ವಿರುದ್ಧ ಸಂಚು ಹೂಡಲು ಸಿಕ್ಕಿದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸರ್ಕಾರದ ದಿಕ್ಕು ತಪ್ಪಿಸಿದ್ದಾರೆ. ಧನ ದಾಹಿಗಳಾದ ಪಾಲಿಕೆ ಅಧಿಕಾರಿಗಳು ತಮ್ಮ ವಾದವನ್ನು ಕೇಳಲು ಮುಂದಾ ಗಲೇ ಇಲ್ಲ~ ಎಂದು ದೂರಿದರು.

ವೈದ್ಯಕೀಯ ಕ್ಷೇತ್ರದಲ್ಲಿ ನಾನು ಅನೇಕ ಸಾಧನೆಗಳನ್ನು ಮಾಡಿದ್ದು ರಾಜ್ಯ ಸರ್ಕಾರದ `ಯಶಸ್ವಿನಿ~ ಯೋಜನೆ ನನ್ನದೇ ಕಲ್ಪನೆಯ ಕೂಸು. ಸಮಾಜಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ನಾನು ಮಾಡಿರುವ ಆವಿಷ್ಕಾರಗಳು ಸುಮಾರು ಎಂಟು ಮಿಲಿಯನ್ ಡಾಲರ್‌ಗಳ ಮೌಲ್ಯವನ್ನು ಹೊಂದಿದೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.