ADVERTISEMENT

ಸಹಕಾರಿ ಸಂಘದಿಂದ ಮದ್ಯ ಮಾರಾಟ: ವಿಷಾದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 6:43 IST
Last Updated 20 ಫೆಬ್ರುವರಿ 2013, 6:43 IST
ಸಹಕಾರಿ ಸಂಘದಿಂದ ಮದ್ಯ ಮಾರಾಟ: ವಿಷಾದ
ಸಹಕಾರಿ ಸಂಘದಿಂದ ಮದ್ಯ ಮಾರಾಟ: ವಿಷಾದ   

ಅಣ್ಣಿಗೇರಿ: ಸಹಕಾರಿ ಸಂಘಗಳ ಮೂಲಕ ಮದ್ಯ ಮಾರಾಟ ಮಾಡಲು ಪರವಾನಗಿ ಕೇಳುವ ಹಂತಕ್ಕೆ ತಲುಪಿದರೆ ಸಹಕಾರ ಸಂಘ ಸ್ಥಾಪಿಸಿದ್ದು ರಾಷ್ಟ್ರ ಕಟ್ಟಲೋ ಅಥವಾ ನಾಶ ಮಾಡಲೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮೇಯರ್ ಡಾ. ಪಾಂಡುರಂಗ ಪಾಟೀಲ ವಿಷಾದಿಸಿದರು.

ಅಣ್ಣಿಗೇರಿ ಒಕ್ಕಲುತನ ಹುಟ್ಟುವಳಿ ಸಹಕಾರಿ ಮಾರಾಟ ಹಾಗೂ ಸಂಸ್ಕರಣ ಸಂಘದ ಸಂಸ್ಥಾಪಕ ಎಸ್.ಎಂ. ಪಾಟೀಲ ಅವರ 109ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಅಧ್ಯಾತ್ಮ, ಸಹಕಾರ ನಂಬಿಕೆಯೇ ಬದುಕಿನ ಆಧಾರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟದ್ದೇ ಸಹಕಾರ. ಅದನ್ನು ಉಳಿಸಿಕೊಳ್ಳಬೇಕು ಎನ್ನುವುದಕ್ಕಿಂತ ಇಡೀ ಆಡಳಿತವನ್ನೇ ಸಹಕಾರಿ ತತ್ವದ ಆಧಾರದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಉಪನ್ಯಾಸಕಿ ರೇಖಾ ಅಮಲಝರಿ, ಪ್ರೊ. ಕೆ.ಬಿ. ತಳಗೇರಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನರಡ್ಡಿ, ಜಿ.ಪಂ ಮಾಜಿ ಅಧ್ಯಕ್ಷ ಸುಧಾ ಲಿಂಗರಡ್ಡಿ, ಸಂಘದ ಅಧ್ಯಕ್ಷ ಎಸ್.ವಿ. ಮಾಡಳ್ಳಿ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಮೇಟಿ, ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ಪಾಟೀಲ, ಸಂಘದ ರಾಜುಗೌಡ ಪಾಟೀಲ, ರಜನಿಕಾಂತ ಭರಮಗೌಡರ, ಹನುಮಂತಪ್ಪ ಕಡೇಮನಿ ಉಪಸ್ಥಿತರಿದ್ದರು.

ದುಂದೂರು ಫಕ್ಕೀರಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಕೆ.ಎನ್. ಗಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಪ್ರಶಾಂತ ಹಂದಿಗೋಳ ಗಾಯನ ಪ್ರಸ್ತುತ ಪಡಿಸಿದರು. ಎಚ್.ಎಫ್. ಕಿರೇಸೂರ ಸ್ವಾಗತಿಸಿದರು. ಸುರೇಶಗೌಡ ಪಾಟೀಲ ವಂದಿಸಿದರು. ಗಂಗಾಧರ ಕೊರವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.