ADVERTISEMENT

ಸೇತುವೆ ತಪಾಸಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:45 IST
Last Updated 27 ಸೆಪ್ಟೆಂಬರ್ 2011, 6:45 IST

ಹುಬ್ಬಳ್ಳಿ: ಭಾರತೀಯ ಬ್ರಿಡ್ಜ್ ಎಂಜಿನಿಯರ್‌ಗಳ ಸಂಸ್ಥೆ (ಐಐಬಿಇ)ಯ ಹುಬ್ಬಳ್ಳಿ-ಧಾರವಾಡ ಘಟಕ ಸೋಮವಾರ ಮೈಸೂರಿನ ಚಾಮುಂಡಿ ರೈಲ್ವೆ ಅಧಿಕಾರಿಗಳ ಕ್ಲಬ್ ಸಭಾಂಗಣದಲ್ಲಿ `ನೀರಿನೊಳಗಿನ ತಪಾಸಣೆ ಹಾಗೂ ಹಾನಿಕಾರಕವಲ್ಲದ ತಪಾಸಣಾ ವಿಧಾನಗಳು~ ವಿಷಯವಾಗಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಐಬಿಇ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಡಾ.ಆರ್.ಎಸ್. ದುಬೆ, ರೈಲ್ವೆ ಸೇತುವೆಗಳ ನಿರ್ಮಾಣದ ವೇಳೆ ನೀರಿನೊಳಗಿನ ತಪಾಸಣೆ ಕುರಿತ ಮಹತ್ವವನ್ನು ವಿವರಿಸಿದರು. ಪಾಲಕ್ಕಾಡ್‌ವಿಭಾಗದ ಕಡಲುಂಡಿ ಸೇತುವೆ ಕುಸಿತದಿಂದ ಉಂಟಾದ ದುರಂತದ ನಂತರ ರೈಲ್ವೆ ಸೇತುವೆಗಳ ಸುರಕ್ಷತೆ ವಿಷಯ ಅತ್ಯಧಿಕ ಪ್ರಾಮುಖ್ಯತೆ ಪಡೆದಿದೆ ಎಂದು ಅವರು ಹೇಳಿದರು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕ ಬಿ.ಬಿ.ವರ್ಮಾ, ಹೆಚ್ಚುವರಿ ವ್ಯವಸ್ಥಾಪಕ ರಾಕೇಶಕುಮಾರ್‌ಗುಪ್ತಾ, ಹಿರಿಯ ವಿಭಾಗೀಯ ಎಂಜಿನಿಯರ್ ಸುನಿಲ್ ಮಾಸ್ಕೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನೂರಕ್ಕೂ ಅಧಿಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಏಳು ಜನ ತಾಂತ್ರಿಕ ಪ್ರಬಂಧಗಳನ್ನು ಮಂಡಿಸಿದರು. ಉಪ ಮುಖ್ಯ ಎಂಜಿನಿಯರ್ (ಸೇತುವೆ ಮಾರ್ಗ) ಕೆ.ಹರಿಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.