ADVERTISEMENT

ಸೋರುತಿಹುದು ಕಿಮ್ಸ್‌ ಗ್ರಂಥಾಲಯ ಕಟ್ಟಡ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 8:52 IST
Last Updated 7 ಅಕ್ಟೋಬರ್ 2017, 8:52 IST

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ಗ್ರಂಥಾಲಯ ಕಟ್ಟಡವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಸದಾಕಾಲ ಗೋಡೆ, ಟೇಬಲ್‌, ಕುರ್ಚಿ, ನೆಲ, ನೀರಿನಿಂದ ತೋಯ್ದಿರುತ್ತವೆ.

ಗೋಡೆಗಳಿಗೆ ಹಸಿರು ಹಾವಸೆ, ಬೂಸ್ಟ್‌ ಹತ್ತಿದೆ. ಕಬ್ಬಣದ ಕುರ್ಚಿ, ಶಟರ್ಸ್‌ಗಳು ಜಂಗು ಹತ್ತಿದೆ. ಗೋಡೆ ಮೇಲಿನ ಫೋಟೊ ಕಳಚಿ ಬಿದ್ದಿದೆ. ಬೆಲೆಬಾಳುವ ಪುಸ್ತಕಗಳು, ಪೇಪರ್‌ಗಳು ಹಾಳಾಗುತ್ತಿವೆ. ಮಳೆ ಇದ್ದಾಗಲೂ ಇದೇ ಸ್ಥಿತಿ, ಬಿಸಿಲು ಇದ್ದಾಗಲೂ ಅದೇ ಸ್ಥಿತಿ. ಟೇರಸ್‌ ಮೇಲಿನ ನೀರಿನ ಟ್ಯಾಂಕ್‌ ಸುರಿಯುತ್ತಿರುವುದರಿಂದ ಹೀಗಾಗಿದೆ. ಅನೇಕ ತಿಂಗಳುಗಳಿಂದ ಹೀಗೆ ಇದೆ. ಈ ಲೈಬ್ರರಿಯಲ್ಲಿ ಕುಳಿತುಕೊಳ್ಳಲು, ನಿಲ್ಲಲೂ ಸಾಧ್ಯವಿಲ್ಲ. ಓದುಗರು ದಿನವೂ ಬಂದು ಬಂದು ಶಪಿಸುತ್ತ ಹೋಗುತ್ತಾರೆ.

ಚಂದ್ರವ್ವ ಬಿಂಜಾಲಿ ಎಂಬ ದಿನಗೂಲಿ ಸಿಬ್ಬಂದಿ ಗ್ರಂಥಾಲಯ ನೋಡಿಕೊಳ್ಳುತ್ತಿದ್ದು ಅವರಿಗೆ ಸಹಾಯಕರಿಲ್ಲ. ನೌಕರಿಯನ್ನೂ ಕಾಯಂ ಮಾಡಿಲ್ಲ. ಗ್ರಂಥಾಲಯದ ದುಸ್ಥಿತಿಯ ಬಗ್ಗೆ ಅನೇಕ ಓದುಗರು ಗ್ರಂಥಾಲಯದ ಮೇಲಧಿಕಾರಿಗಳಿಗೆ ಮತ್ತು ಕಿಮ್ಸ್‌ ಆಡಳಿತದವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗೊಂದು ಉತ್ತಮ ಸರ್ಕಾರಿ ವ್ಯವಸ್ಥೆ ಕಣ್ಣೆದುರೇ ಕುಸಿಯುತ್ತಿದೆ. ನಶಿಸುತ್ತಿದೆ. ದಯವಿಟ್ಟು ಸಂಬಂಧಪಟ್ಟವರು ಗಮನಿಸಿ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.