ಹುಬ್ಬಳ್ಳಿ: ಇಲ್ಲಿನ ನೆಹರೂ ನಗರದ ಎಚ್‌ಡಿಎಂಸಿ ಉದ್ಯಾನದಲ್ಲಿ ಜೆಎಸ್ ಗ್ಲೋಬಲ್ ಫೌಂಡೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವೃಕ್ಷಾರೋಪಣಾ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಾಡು ಬೆಳೆಸಿ, ನಾಡು ಉಳಿಸಬೇಕಾಗಿದೆ. 10 ಲಕ್ಷ ಸಸಿ ನೆಡುವ ಸಂಕಲ್ಪ ಮಾಡಿರುವ ಫೌಂಡೇಷನ್ ಈಗಾಗಲೇ 513 ಸಸಿ ನೆಟ್ಟಿರುವುದು ಶ್ಲಾಘನೀಯ. 30 ಲಕ್ಷ ಸಸಿ ನೆಡುವ ಗುರಿ ಹೊಂದಬೇಕು’ ಎಂದರು.
ಮಾಜಿ ಸಂಸದ ಐ.ಜಿ.ಸನದಿ, ಶಂಕರ ಬಿದರಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಜಿಶಾನ್ ಸಿರ್ಸಂಗಿ, ಶರಣಪ್ಪ ಕೊಟಗಿ, ಡಾ.ನೆತಾಳಿ, ಅಂದಪ್ಪ ಸಂಕನೂರು, ಪ್ರೀತಿ, ಮೋಹನ್ ಹೊಸಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.