ADVERTISEMENT

ಸ್ವಚ್ಛ ರೈಲು ನಿಲ್ದಾಣ: ಹುಬ್ಬಳ್ಳಿಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 7:01 IST
Last Updated 14 ಜನವರಿ 2018, 7:01 IST

ಹುಬ್ಬಳ್ಳಿ: ಇಕ್ಸಿಗೊ ಸಂಸ್ಥೆ ನಡೆಸಿದ ಸ್ವಚ್ಛತಾ ಸರ್ವೇಯಲ್ಲಿ ನಗರ ಕೇಂದ್ರ ರೈಲು ನಿಲ್ದಾಣ 2ನೇ ಸ್ಥಾನ ಪಡೆಯುವ ಮೂಲಕ ಉತ್ತಮ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ವಚ್ಛತಾ ಪಟ್ಟಿಯಲ್ಲಿ ಕೇರಳದ ಕೋಯಿಕ್ಕೋಡ್‌ ಪ್ರಥಮ ಸ್ಥಾನ ಪಡೆದಿದ್ದು, ದಾವಣಗೆರೆ ನಿಲ್ದಾಣ ತೃತೀಯ ಸ್ಥಾನ ಪಡೆದಿದೆ. ಹುಬ್ಬಳ್ಳಿ ರೈಲ್ವೆ ಜಂಕ್ಷನ್‌ ನೈರ್ಮಲ್ಯ ನಿರ್ವಹಣೆಯಲ್ಲಿ ಉತ್ತಮ ನಿಲ್ದಾಣಗಳ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ದೆಹಲಿಯ ಹಜರತ್‌ ನಿಜಾಮುದ್ದೀನ್ ನಿಲ್ದಾಣ ಅತ್ಯಂತ ಅನೈರ್ಮಲ್ಯದಿಂದ ಕೂಡಿದ ನಿಲ್ದಾಣ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ರೈಲು ನಿಲ್ದಾಣಗಳ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತಂತೆ ಆ್ಯಪ್‌ ಆಧಾರಿತ ಪ್ರವಾಸಿ ಪೋರ್ಟೆಲ್‌ ಇಕ್ಸಿಗೊ ಸಂಸ್ಥೆ ದೇಶದಾದ್ಯಂತ ಸಮೀಕ್ಷೆ ನಡೆಸಿತ್ತು. ಶೇ 40ರಷ್ಟು ನಿಲ್ದಾಣಗಳು ಸ್ವಚ್ಛವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.