ADVERTISEMENT

ಶಾಲೆಗಳಿಗೆ ₹6 ಕೋಟಿ ಅನುದಾನ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 2:01 IST
Last Updated 29 ಸೆಪ್ಟೆಂಬರ್ 2022, 2:01 IST
ನವಲಗುಂದ ನೂತನ ಶಿಕ್ಷಕರ ಭವನದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಿದರು
ನವಲಗುಂದ ನೂತನ ಶಿಕ್ಷಕರ ಭವನದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಿದರು   

ನವಲಗುಂದ: ‘ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಶಿಕ್ಷಕರ ಶ್ರಮದಿಂದ ಮಾತ್ರ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ’ ಎಂದು ಸಕ್ಕರೆ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಇಲ್ಲಿನ ನೂತನ ಶಿಕ್ಷಕರ ಭವನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನವಲಗುಂದ ತಾಲ್ಲೂಕಿನಲ್ಲಿರುವ ಶಾಲೆಗಳಿಗೆ ಸುಮಾರು ₹6 ಕೋಟಿ ಅನುದಾನದಲ್ಲಿ ಸುಮಾರು 48 ಕೊಠಡಿಗಳಿಗೆ ಮಂಜೂರಾತಿ ದೊರೆತಿದೆ. ಅಣ್ಣೀಗೇರಿ ತಾಲ್ಲೂಕಿಗೆ ಈಗಾಗಲೇ ₹5 ಕೋಟಿಯ ಅನುದಾನದಲ್ಲಿ ಕ್ರೀಡಾ ಪಾರ್ಕ್‌ ನಿರ್ಮಿಸಲು ಅನುಮೂದನೆ ನೀಡಲಾಗಿದೆ’ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡದ ಮಾತನಾಡಿದರು. ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಡಾ. ರೇಣುಕಾ ಅಮಲಝರಿ ಉಪನ್ಯಾಸ ನೀಡಿದರು.

ಕಾದು ಕಾದು ಸುಸ್ತಾದ ಶಿಕ್ಷಕರು: ಬೆಳಿಗ್ಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಚಿವರು ಮಧ್ಯಾಹ್ನ ಬಂದ ಕಾರಣ ಶಿಕ್ಷಕರು ಕಾದು ಕಾದು ಸುಸ್ತಾದರು.

ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ, ಮುಖ್ಯಾಧಿಕಾರಿ ವಿರೇಶ ಹಸಬಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಬಿ.ಬಿ.ಹೊನ್ನಕುದರಿ, ಸಿದ್ದನಗೌಡ ಪಾಟೀಲ, ವೈ.ಎಚ್. ಬಣವಿ, ರೇಣುಕಾ ಮುರನಾಳ, ಎಸ್.ಎಫ್. ನೀರಲಗಿ, ಪಿ.ಕೆ. ಹಿರೇಗೌಡರ, ಆರ್.ಎಸ್.ಪಾಟೀಲ, ಆರ್.ಎಚ್.ನೆಗಲಿ, ವಿ.ಎಂ.ಹಿರೇಮಠ, ಸಂತೋಷ ಪಾಟೀಲ, ವಿ.ಡಿ.ರಂಗಣ್ಣವರ, ಎಸ್.ಎಚ್.ಹರಕುಣ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.