ADVERTISEMENT

ಮಹಿಳೆಯ ಹೊಟ್ಟೆಯಲ್ಲಿತ್ತು 9 ಕೆ.ಜಿ ಗಡ್ಡೆ

ಕೆಎಲ್‌ಇ ಸುಚಿರಾಯು ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 12:47 IST
Last Updated 11 ನವೆಂಬರ್ 2020, 12:47 IST

ಹುಬ್ಬಳ್ಳಿ: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 9 ಕೆ.ಜಿ.ಯ ಮಾಂಸದ ಗಡ್ಡೆಯನ್ನು ನಗರದ ಕೆಎಲ್‌ಇ ಸುಚಿರಾಯು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

‘ಹೊಟ್ಟೆ ನೋವು ಹಾಗೂ ಉಬ್ಬುವಿಕೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆ ಆಸ್ಪತ್ರೆಗೆ ಬಂದಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಅವರಿಗೆ ಅತ್ಯಂತ ವಿರಳವಾದ ಸೈಟಸ್ ಇನ್‌ವರ್ಸಸ್ ಟೂಟ್ಯಾಲಿಸ್’ ಸಮಸ್ಯೆ ಇರುವುದು ಗೊತ್ತಾಯಿತು’ ಎಂದು ಶಸ್ತ್ರಚಿಕಿತ್ಸಾ ತಜ್ಞ ಡಾ. ಜಯಪ್ರಭು ಉತ್ತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಳಿಕ ಅವರಿಗೆ ಸತತ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿ, 38 ಸೆಂಟಿಮೀಟರ್ ಉದ್ದ ಹಾಗೂ 26 ಸೆಂಟಿಮೀಟರ್ ಅಗಲದ 9 ಕೆ.ಜಿ ತೂಕದ ಮಾಂಸದ ಗಡ್ಡೆಯನ್ನು ಹೊರ ತೆಗೆಯಲಾಯಿತು’ ಎಂದು ಹೇಳಿದ್ದಾರೆ.

ADVERTISEMENT

ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿದ್ದ ಅರವಳಿಕೆ ತಜ್ಞರಾದ ಡಾ. ತೇಜಸ ಕುಲಕರ್ಣಿ, ಡಾ. ಸಾಗರ ಕೂಳ್ಳಿ ಹಾಗೂ ಸಹಾಯಕರಿಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ವಿಶಾಖಾ ಮಧುರಕರ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.