ADVERTISEMENT

ಗ್ರಾಮ ದೇವಿಯರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ

ಸಾಸ್ವಿಹಳ್ಳಿ; ಸಂಭ್ರಮದ ಮೆರವಣಿಗೆ, ವಿವಿಧ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:40 IST
Last Updated 4 ಮೇ 2025, 15:40 IST
ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿಯಲ್ಲಿ ನವೀಕರಣಗೊಂಡ ಗ್ರಾಮ ದೇವಿಯರ ಮೂರ್ತಿಗಳ ಪುರಪ್ರವೇಶ ಈಚೆಗೆ ಸಂಭ್ರಮದಿಂದ ಜರುಗಿತು
ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿಯಲ್ಲಿ ನವೀಕರಣಗೊಂಡ ಗ್ರಾಮ ದೇವಿಯರ ಮೂರ್ತಿಗಳ ಪುರಪ್ರವೇಶ ಈಚೆಗೆ ಸಂಭ್ರಮದಿಂದ ಜರುಗಿತು   

ಅಣ್ಣಿಗೇರಿ: ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ನವೀಕರಣಗೊಂಡ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಮೂರ್ತಿಗಳ ಪುರ ಪ್ರವೇಶ ಈಚೆಗೆ ಸಂಭ್ರಮದಿಂದ ನಡೆಯಿತು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಾದ್ಯ ಮೇಳದ ಜತೆಗೆ ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ ಹೊತ್ತು, ಆರತಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಸಾಂಪ್ರದಾಯಕ ಉಡುಪು ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಗ್ರಾಮದಲ್ಲಿ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು, ನಾಟಕ, ಸವಾಲ್ ಭಜನಾ ಪದ, ರಸಮಂಜರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ADVERTISEMENT

ಕಾರ್ಯಕ್ರಮದಲ್ಲಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನವಲಗುಂದದ ಬಸವಲಿಂಗ ಸ್ವಾಮೀಜಿ, ಎ.ಸಿ.ವಾಲಿ ಗುರೂಜಿ, ವೀರೇಂದ್ರ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಶಿವಶರಣೆ ನೀಲಮ್ಮ ತಾಯಿ, ಗುದ್ನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಗ್ರಾಮಕ್ಕೆ ಅಗತ್ಯ  ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ವಕೀಲ ಪ್ರಕಾಶ ಅಂಗಡಿ, ಗ್ರಾಮದ ಹಿರಿಯರಾದ ವಿ.ಡಿ.ಅಂದಾನಿಗೌಡ್ರ, ವೆಂಕರಡ್ಡಿ ಹೊಸಮನಿ, ಶಿವಾಜಿ ಮೊಖಾಸಿ, ಶಿವನಗೌಡ ಅಂದಾನಿಗೌಡ್ರ, ವಿನಾಯಕ ಬೋಸ್ಲೆ, ದೊಡ್ಡಫಕ್ಕಿರಪ್ಪ ಗಾಣಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.