ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯವು ರಾಜ್ಯೋತ್ಸವ ಅಂಗವಾಗಿ ನೀಡುವ ‘ಅರಿವೇ ಗುರು’ ಪ್ರಶಸ್ತಿಗೆ ಪ್ರೊ.ವೀರಣ್ಣ ರಾಜೂರ (ಸಾಹಿತ್ಯ), ಪ್ರೊ.ಅಜಿತ ಕೇಶವ ಕೆಂಬಾವಿ (ಖಗೋಳ ವಿಜ್ಞಾನ) ಹಾಗೂ ಪ್ರೊ.ಆರ್.ಜಿ.ಅಕ್ಕಿಹಾಳ (ಸಮಾಜವಿಜ್ಞಾನ) ಆಯ್ಕೆಯಾಗಿದ್ಧಾರೆ.
ಪ್ರಶಸ್ತಿಯು ₹ ತಲಾ 25 ಸಾವಿರ ನಗದು, ಫಲಕ ಒಳಗೊಂಡಿದೆ. ವಿಶ್ವವಿದ್ಯಾಲಯದ ಸುವರ್ಣಮಹೋತ್ಸವ ಸಭಾಭವನದಲ್ಲಿ ನ.29ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.