ADVERTISEMENT

ಕುಂದಗೋಳ | ‘ಬಸವಣ್ಣನವರ ಸಮಾನತೆ ತತ್ವ‌ ಜೀವನಸ್ಪೂರ್ತಿ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:18 IST
Last Updated 30 ಏಪ್ರಿಲ್ 2025, 16:18 IST
ಕುಂದಗೋಳ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜರುಗಿದ ಬಸವ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಂ.ಆರ್.ಪಾಟೀಲ ಉದ್ಘಾಟಿಸಿದರು 
ಕುಂದಗೋಳ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜರುಗಿದ ಬಸವ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಂ.ಆರ್.ಪಾಟೀಲ ಉದ್ಘಾಟಿಸಿದರು    

ಕುಂದಗೋಳ: ‘ಬಸವಣ್ಣನವರ ಸಮಾನತೆಯ ತತ್ವದಡಿಯಲ್ಲಿ ಎಲ್ಲರೂ ಬದುಕು ಸಾಗಿಸದರೆ ಎಲ್ಲರಿಗೂ ಒಳಿತಾಗುತ್ತದೆ’ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜರುಗಿದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಮುಖಂಡರಾದ ಶಿವಾನಂದ ಬೆಂತೂರ, ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿದರು.  ಪಟ್ಟಣದ ಗಾಳಿಮರೆಮ್ಮ ದೇವಸ್ಥಾನದಿಂದ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಬೀದಿಗಳಲ್ಲಿ ಸಂಚರಿಸಿತು. ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉಮೇಶ ಹೆಬಸೂರ, ಧೃತಿ ಸಾಲ್ಮನಿ, ಶಾಮಸುಂದರ ದೇಸಾಯಿ, ಮಂಜುನಾಥ ಹಿರೇಮಠ, ಪ್ರಕಾಶ ಕೊಕಾಟೆ, ಎ.ಬಿ.ಉಪ್ಪಿನ, ಶಿವಾನಂದ ನವಲಗುಂದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಮಾಜದ ಉತ್ತಮ ಅಂಕ‌ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಎ.ಸಿ.ಶಾನವಾಡ ಶಿಕ್ಷಕರು ಉಪನ್ಯಾಸ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.