ADVERTISEMENT

ಭಗವದ್ಗೀತೆಯಲ್ಲಿದೆ ಆಧ್ಯಾತ್ಮಿಕ ಜ್ಞಾನ

ಚಿನ್ಮಯ ಮಿಷನ್ ಕೇಂದ್ರದ ಆಚಾರ್ಯ ಕೃತಾತ್ಮಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:56 IST
Last Updated 3 ಡಿಸೆಂಬರ್ 2022, 15:56 IST
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯು ಗೀತಾ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಮರ್ಪಣಾ ಕಾರ್ಯಕ್ರಮವನ್ನು ಚಿನ್ಮಯ ಮಿಷನ್ ಕೇಂದ್ರದ ಆಚಾರ್ಯ ಕೃತಾತ್ಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯು ಗೀತಾ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಮರ್ಪಣಾ ಕಾರ್ಯಕ್ರಮವನ್ನು ಚಿನ್ಮಯ ಮಿಷನ್ ಕೇಂದ್ರದ ಆಚಾರ್ಯ ಕೃತಾತ್ಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ವಿಶ್ವದಲ್ಲಿ ಭಗವದ್ಗೀತೆಗಿಂತ ಶ್ರೇಷ್ಠವಾದ ಗ್ರಂಥ ಇನ್ನೊಂದಿಲ್ಲ‌. ಜ್ಞಾನಕ್ಕೆ ಇನ್ನೊಂದು ಹೆಸರೇ ಭಗವದ್ಗೀತೆ. ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುವ ಗೀತೆಯನ್ನು ನಿತ್ಯ ಪಠಣ ಮಾಡುವುದರಿಂದ, ಮನುಷ್ಯನ ಜೀವನ ಮತ್ತು ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗುತ್ತದೆ’ ಎಂದು ಹುಬ್ಬಳ್ಳಿಯ ಚಿನ್ಮಯ ಮಿಷನ್ ಕೇಂದ್ರದ ಆಚಾರ್ಯ ಕೃತಾತ್ಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗೋಕುಲ ರಸ್ತೆಯಲ್ಲಿರುವ ಹವ್ಯಕ ಭವನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯು ಗೀತಾ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಗೀತೆಯ ಭಾಷೆ ಸುಲಭವಾಗಿ ಅರಿಯುವಷ್ಟು ಸರಳವಾಗಿದ್ದರೂ ಆಳವಾದ ಅರ್ಥಗಳನ್ನು ಅದು ಒಳಗೊಂಡಿದೆ. ಆಧ್ಯಾತ್ಮಿಕವಾಗಿ ಅಷ್ಟೇ ಅಲ್ಲದೆ, ಬದುಕಿಗೂ ಗೀತೆ ಮಾರ್ಗದರ್ಶಿಯಾಗಿದೆ’ ಎಂದರು.

ಅಭಿಯಾನದ ಸಂಯೋಜಕಿ ಹಾಗೂ ಹವ್ಯಕ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಹೆಗಡೆ ಹಾಗೂ ಇತರ ಸದಸ್ಯರ ನೇತೃತ್ವದಲ್ಲಿ ಭಗವದ್ಗೀತೆಯ 18 ಅಧ್ಯಾಯಗಳನ್ನು 200ಕ್ಕೂ ಹೆಚ್ಚು ಮಂದಿ ಪಠಣ ಮಾಡಿದರು. ಭಗವದ್ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್ ಗುಮಾಸ್ತೆ ಸ್ವಾಮೀಜಿ ಅವರ ಪರಿಚಯ ಮಾಡಿದರು. ಕಾರ್ಯದರ್ಶಿ ಸುದರ್ಶನ್ ಜಿ.ಎಸ್ ವಂದಿಸಿದರು. ಶ್ರೀಕಾಂತ ಹೆಗಡೆ, ಟಿ.ಎಸ್. ಭಟ್, ಸಂಯೋಜಕ ಅರವಿಂದ ಮುತ್ತಗಿ, ಮನೋಹರ ಪರ್ವತಿ ಹಾಗೂ ಸುರೇಶ್ ಹೆಗ್ಡೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.