ADVERTISEMENT

ಕಲಘಟಗಿ: ಕೆಲಸದ ಒತ್ತಡ ತಾಳಲಾರದೇ ಅಧಿಕಾರಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 5:08 IST
Last Updated 19 ನವೆಂಬರ್ 2021, 5:08 IST
ನಂತರ ಘಟನಾ ಸ್ಥಳಕ್ಕೆ ಶಾಸಕ ಸಿ. ಎಂ ನಿಂಬಣ್ಣವರ ಭೇಟಿ ನೀಡಿ ಸೂಕ್ತವಾದ ತನಿಖೆ ನಡೆಸಿ  ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಘಟನಾ ಸ್ಥಳಕ್ಕೆ ಶಾಸಕ ಸಿ. ಎಂ ನಿಂಬಣ್ಣವರ ಭೇಟಿ ನೀಡಿ ಸೂಕ್ತವಾದ ತನಿಖೆ ನಡೆಸಿ  ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.   

ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದ ಅಧಿಕಾರಿ ಹುಬ್ಬಳ್ಳಿಯ ಸುಭಾಷ ಬುಲಬುಲೆ (58) ಎಂಬುವವರು ಕೆಲಸದ ಒತ್ತಡ ತಾಳಲಾರದೆ ಪಾಸ್ ವಿತರಣೆ ಕೇಂದ್ರದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

‘ಈಗ ವಿದ್ಯಾರ್ಥಿಗಳ ಪಾಸುಗಳನ್ನು ಕಂಪ್ಯೂಟರ್ ಮೂಲಕ ವಿತರಣೆ ಮಾಡುತ್ತಿದ್ದು ನಾನು ಕಂಪ್ಯೂಟರ್ ತರಬೇತಿ ಪಡೆದಿಲ್ಲದ ಕಾರಣ ಪಾಸ್ ನೀಡಲು ಮಾಹಿತಿ ಗೊತ್ತಾಗುತ್ತಿಲ್ಲ. ಹೀಗಾಗಿ ಕೆಲಸದ ಒತ್ತಡ ಜಾಸ್ತಿ ಆಗಿದೆ’ ಎಂದು ಪತ್ರ ಬರೆದಿಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನಾ ಸ್ಥಳಕ್ಕೆ ಶಾಸಕ ಸಿ. ಎಂ ನಿಂಬಣ್ಣವರ ಭೇಟಿ ನೀಡಿ ಸೂಕ್ತವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.