ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಇದೀಗ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಇದುವರೆಗೆ ಪರಿಷತ್ತಿನ ಅಧ್ಯಕ್ಷರಾದ ಎಲ್ಲಾ ಮಠಾಧೀಶ ಸಾಹಿತಿಗಳನ್ನು ದಶಮಾನೋತ್ಸವ ಸಂಭ್ರಮಕ್ಕೆ ಆಮಂತ್ರಿಸುವ ಕಾರ್ಯಕ್ರಮ ರೂಪಿಸಲಾಗಿದೆ.
ನಗರದ ಮೂರು ಸಾವಿರ ಮಠದಲ್ಲಿ ಜೂನ್ 19ರಂದು ಬೆಳಿಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಕವಿಗಳು ಮತ್ತು ಬರಹಗಾರರು ಪಾಲ್ಗೊಳ್ಳಲಿದ್ದಾರೆ. ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೇ 19ರಂದು ಅಂಬಲ್ ಪಾಡಿ ದೇವಸ್ಥಾನದ ಸಭಾಂಗಣದಲ್ಲಿ ತುಳು ಕನ್ನಡ ಸಾಮರಸ್ಯ ಕಾರ್ಯಕ್ರಮ, ಜೂನ್ 29ರಂದು ಬಾಗಲಕೋಟೆ ಸೀತಾಗಿರಿಯ ಇಂಚಗೇರಿ ಶಾಖಾಮಠದಲ್ಲಿ, ನಂತರದ ದಿನಗಳಲ್ಲಿ ಮುಂಡರಗಿ, ಕೊಪ್ಪಳ ಹಾಗೂ ಹಾವೇರಿ ಮಠಗಳಲ್ಲಿ ದಶಮಾನೋತ್ಸವ ಸಂಭ್ರಮ ವರ್ಷಪೂರ್ತಿ ಜರುಗಲಿದೆ ಎಂದು ಪರಿಷತ್‌ನರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಹಾಗೂಸಂಘಟನಾ ಕಾರ್ಯದರ್ಶಿ ಅನಂತ ಕುಲಕರ್ಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.