ಧಾರವಾಡ: ದೋಷಯುಕ್ತ ಹೇರ್ ರಿಮೂವಲ್ ಯಂತ್ರ ಮಾರಾಟ ಪ್ರಕರಣದಲ್ಲಿ ಎರಿಕ್ಕಾ ಇಂಡಿಯಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಯಂತ್ರದ ಹಣವನ್ನು ಬಡ್ಡಿಸಮೇತ ಗ್ರಾಹಕನಿಗೆ ವಾಪಸ್ ನೀಡುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹ 25ಸಾವಿರ, ಪ್ರಕರಣದ ವೆಚ್ಚ ₹ 5 ಸಾವಿರ ಹಾಗೂ ಯಂತ್ರದ ದರ ₹ 8749ಕ್ಕೆ ವಾರ್ಷಿಕ ಶೇ 8 ಬಡ್ಡಿ ಲೆಕ್ಕಹಾಕಿ ಮೊತ್ತ ನೀಡುವಂತೆ ಆದೇಶದಲ್ಲಿ ತಿಳಿಸಿದ್ಧಾರೆ.
ಏನಿದು ಪ್ರಕರಣ?: ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ಯಶಸ್ವಿ ನಾಯ್ಕ ಅವರು 2023 ಜೂನ್ 7ರಂದು ಎರಿಕ್ಕಾ ಇಂಡಿಯಾದ ಕಂಪನಿಯಿಂದ ಹೇರ್ ರಿಮೂವಲ್ ಯಂತ್ರ ಖರೀದಿಸಿದ್ದರು. ಯಪಿಐನಲ್ಲಿ ₹ 8749 ಪಾವತಿಸಿದ್ದರು. ಯಂತ್ರಕ್ಕೆ ಒಂದು ವರ್ಷ ವಾರೆಂಟಿ ಇತ್ತು.
ಖರೀದಿಸಿದ ಕೆಲವು ತಿಂಗಳುಗಳಲ್ಲಿ ಯಂತ್ರ ಹಾಳಾಗಿತ್ತು. ಯಶಸ್ವಿ ಅವರು ಕಂಪನಿಗೆ ದೂರು ನೀಡಿದ್ದರು. ವಾರಂಟಿ ಅವಧಿ ಮುಗಿದಿದೆ ಹೊಸ ಯಂತ್ರ ಕೊಡಲಾಗದು ಎಂದು ಕಂಪನಿಯವರು ಹೇಳಿದ್ದರು.
ಯಶಸ್ವಿ ಅವರು ಕಂಪನಿ ವಿರುದ್ದ 2025 ಮಾರ್ಚ್ 7ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.