ADVERTISEMENT

ದೇಶಿ ಕ್ರೀಡೆಗಳ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:43 IST
Last Updated 11 ಫೆಬ್ರುವರಿ 2020, 13:43 IST

ಹುಬ್ಬಳ್ಳಿ: ವಿಶ್ವ ಕನ್ನಡ ಬಳಗದ ವತಿಯಿಂದ ಫೆ. 12ರಿಂದ 14ರ ವರೆಗೆ ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ನಾಲ್ಕನೇ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡೆಗಳ ಸಮ್ಮೇಳನ ನಡೆಯಲಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಎಸ್‌.ಚೌಶೆಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮ್ಮೇಳದನ ಅಧ್ಯಕ್ಷರನ್ನಾಗಿ ಜಾನಪದ ಕಲಾವಿದೆ ಪಾರ್ವತೆವ್ವ ಸಿದ್ದಪ್ಪ ಹೊಂಗಲ್‌ ಅವರನ್ನು ಆಯ್ಕೆ ಮಾಡಲಾಗಿದೆ. 12ರಂದು ಸಂಜೆ 4.30ರಿಂದ ದೇಶಿ ಕ್ರೀಡೆಗಳು ಆರಂಭವಾಗಲಿವೆ. 5.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಬಸವರಾಜು ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸುವರು’ ಎಂದರು.

13 ರಂದು ಕವಿಗೋಷ್ಠಿ ಆಯೋಜಿಸಿದ್ದು, ಸಾಹಿತಿ ಚಂದ್ರಶೇಖರ ಮೂಡಲಗೇರಿ ಉದ್ಘಾಟಿಸುವರು. ಆರ್‌.ಎಂ.ಗೊಗೇರಿ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಬಳಗದ ಸಂಚಾಲಕಿ ಲಕ್ಷ್ಮಿ ಶ್ರೀಧರ ಮಾತನಾಡಿ ‘14ರಂದು ಸಂಜೆ 5.30 ಐವರು ಬಾಲ ಪ್ರತಿಭೆಗಳಿಗೆ ಸನ್ಮಾನ, ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ. ಸೇವಾ ಭಾರತಿ ಟ್ರಸ್ಟ್‌ ಕಾರ್ಯದರ್ಶಿ ಭಾರತಿ ಸಂದಕುಮಾರ ಸಮ್ಮೇಳನ ಉದ್ಘಾಟಿಸುವರು. ವಿಶ್ವ ಕನ್ನಡ ಬಳಗದಲ್ಲಿ ಮಹಿಳಾ ಘಟಕ ರಚಿಸಿದ್ದು, ಮೊದಲ ಬಾರಿಗೆ ಮಹಿಳಾ ಸಮಾವೇಶ ನಡೆಸಲಾಗುತ್ತಿದೆ’ ಎಂದರು.

ನಿರ್ಮಲಾ ಮುದ್ದಣ್ಣವರ, ಎಚ್‌.ಎಸ್‌.ಕಿರಣ್‌, ಶಂಕರ್‌, ರತ್ನ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.