ADVERTISEMENT

ದೂರದಿಂದಲೇ ಸಿದ್ಧಾರೂಢರ ದರ್ಶನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 16:47 IST
Last Updated 7 ಜುಲೈ 2020, 16:47 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಕಟ್ಟೆಯಿಂದ ಕೆಳಗಡೆ ದರ್ಶನ ಪಡೆಯಲು ಬ್ಯಾರಿಕೇಡ್‌ ಹಾಕಿರುವುದು
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಕಟ್ಟೆಯಿಂದ ಕೆಳಗಡೆ ದರ್ಶನ ಪಡೆಯಲು ಬ್ಯಾರಿಕೇಡ್‌ ಹಾಕಿರುವುದು   

ಹುಬ್ಬಳ್ಳಿ: ಸಿದ್ಧಾರೂಢ ಸ್ವಾಮಿ ಮಠದ ಸುತ್ತಮುತ್ತಲಿನ ಕೆಲ ಬಡಾವಣೆಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಮಠದ ಆವರಣದಲ್ಲಿ ಸಿದ್ಧಾರೂಢರ ದರ್ಶನದ ಅಂತರವನ್ನು ಹೆಚ್ಚಿಸಲಾಗಿದೆ.

ಆರ್‌.ಎನ್‌. ಶೆಟ್ಟಿ ರಸ್ತೆ ಸಮೀಪದ ಗಣೇಶ ನಗರದಲ್ಲಿ ಸೋಂಕು ದೃಢಪಟ್ಟಿದೆ. ಆದ್ದರಿಂದ ಮಠದ ಮುಂಭಾಗದಲ್ಲಿದ್ದ ಕಟ್ಟೆಯ ಕೆಳಗಿನಿಂದಲೇ ಭಕ್ತರು ದರ್ಶನ ಪಡೆಯಬೇಕಾಗಿದೆ. ಲಾಕ್‌ಡೌನ್‌ ಅವಧಿ ಪೂರ್ಣಗೊಂಡ ಬಳಿಕ ಭಕ್ತರಿಗೆ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಅವಕಾಶ ಕೊಡಲಾಗಿತ್ತು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸುರಕ್ಷತಾ ಅಂತರ ಪಾಲನೆಗೆ ಒತ್ತು ಕೊಡಲಾಗಿದೆ. ಮಠದ ಭಕ್ತರೇ ಸೇರಿಕೊಂಡು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಎಂದಿನಂತೆ ನಿತ್ಯ ಪೂಜಾ ಕಾರ್ಯಗಳು ನಡೆಯಲಿದ್ದು, ಭಕ್ತರು ದೂರದಿಂದಲೇ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.