ಅಣ್ಣಿಗೇರಿ: ‘ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸಮಾನತೆಯ ಹಾಗೂ ಜಾತಿರಹಿತ ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಅವರ ಅನುಭವ ಮಂಟಪ ಪರಿಕಲ್ಪನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೊಂಡಿತ್ತು’ ಎಂದು ಚರಂತೇಶ್ವರ ವಿರಕ್ತಮಠದ ಬಸವ ಬೆಳವಿ ಶರಣಬಸವ ದೇವರು ಹೇಳಿದರು.
ಪಟ್ಟಣದ ನಿಂಗಮ್ಮ ಎಸ್.ಹೂಗಾರ ಸಮೂಹ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಲಿಂ.ಗುದ್ನೇಶ್ವರ ಸ್ವಾಮೀಜಿ ಸುವರ್ಣ ಮಹೋತ್ಸವದ ಮಂಗಳವಾರ ನಡೆದ ‘ಜೀವನ ದರ್ಶನ ಪ್ರವಚನ‘ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಾದಿ ಶರಣರ ಅರಿವು, ಆಚಾರ, ಅನುಭವದಿಂದ ರಚಿತವಾದ ವಚನಗಳಲ್ಲಿ ಬಸವತತ್ವ ದರ್ಶನವಿದೆ. ಭಾರತೀಯ ದಾರ್ಶನಿಕ ಪರಂಪರೆಯ ಕೆನೆಯಾಗಿರುವ ಬಸವತತ್ವ ದರ್ಶನದಲ್ಲಿ ಗುರುತತ್ತ್ವ ಅಮೂಲ್ಯವಾಗಿದೆ’ ಎಂದರು.
ಧರ್ಮಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾದ ಅವಶ್ಯವಿದೆ‘ ಎಂದು ಹೇಳಿದರು.
ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಶರಣಬಸಪ್ಪನವರು ದೇಶಮುಖ, ಬಸಪ್ಪ ಕರ್ಲವಾಡ, ಕಲ್ಲಪ್ಪ ಬಾಳಿಕಾಯಿ, ಗುರುಸಿದ್ದಪ್ಪ ಕೊಪ್ಪದ, ಷಣ್ಮುಖ ಗುರಿಕಾರ, ಪ್ರಕಾಶ ಬಳ್ಳೊಳ್ಳಿ, ವಿರೇಶ ಶಾನಭೋಗರ, ಚಂಬಣ್ಣ ಹಾಳದೋಟರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.