ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜದಿಂದ ನಗರದ ಪಾನ್‌ಬಜಾರ್‌ನಲ್ಲಿರುವ ವಿಠ್ಠಲ ಹರಿ ಮಂದಿರದಲ್ಲಿ ಆಗಸ್ಟ್ 13ರಿಂದ 17ರವರೆಗೆ ಕಾಲ ಜ್ಞಾನೇಶ್ವರಿ ಪಾರಾಯಣ, ಕೃಷ್ಣ ಜನ್ಮಾಷ್ಟಮಿ ಹಾಗೂ ದಿಂಡಿ ಉತ್ಸವ ಕಾರ್ಯಕ್ರಮಗಳು ಜರುಗಿದವು.
ವೆಂಕಟೇಶ ಪಿಸೆ ಅವರು ಜ್ಞಾನೇಶ್ವರಿ ಪಾರಾಯಣ, ಪಂಢರಪುರದ ಯಶವಂತಬುವಾ ಪ್ರಭಾಕರಬುವಾ ಬೋಧಲೆ ಮಹಾರಾಜರಿಂದ ಕೀರ್ತನೆ ನಡೆಯಿತು.
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪಾನ್‌ಬಜಾರ್ ಘಟಕದ ಮಹಿಳಾ ಮಂಡಳದವರಿಂದ ಭಜನೆ ಹಾಗೂ ಬಾಲಕೃಷ್ಣನ ತೊಟ್ಟಿಲೋತ್ಸವ ನೆರವೇರಿತು. ಆಗಸ್ಟ್ 17ರಂದು ಸಂಜೆ 5ಕ್ಕೆ ದಿಂಡಿ ಉತ್ಸವ ನಡೆಯಿತು.
ವಿಠ್ಠಲ ಹರಿಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಜವಳಿಸಾಲು, ಬೆಳಗಾಂವ್ ಗಲ್ಲಿ, ದುರ್ಗದಬೈಲ್, ದತ್ತಾತ್ರೇಯ ದೇವಸ್ಥಾನ, ತೊರವಿಗಲ್ಲಿ, ಇಟಗಿ ಮಾರುತಿ ದೇವಸ್ಥಾನ, ಬಾರದಾನ ಸಾಲ, ಸರಾಫ್ ಗಟ್ಟಿ ಮೂಲಕ ಸಾಗಿತು. ರಾತ್ರಿ 9ಕ್ಕೆ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ನೆರವೇರಿತು. ಲಕ್ಷ್ಮೇಶ್ವರದ ಗೋವಿಂದರಾವ ಮಾಂಡ್ರೆ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.