ADVERTISEMENT

ಪತ್ರ | ಸಿ.ಎಂ ವರ್ತನೆಗೆ ಬೇಸರ; ಎಎಸ್ಪಿ ಬರಮನಿ ವಿಆರ್‌ಎಸ್‌ ಕೋರಿಕೆ

ಎಎಸ್ಪಿ ಸಲ್ಲಿಸಿದ್ದೆನ್ನಲಾದ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 16:06 IST
Last Updated 3 ಜುಲೈ 2025, 16:06 IST
ಕೋರಿಕೆ ಪತ್ರ
ಕೋರಿಕೆ ಪತ್ರ   

ಧಾರವಾಡ: ಮುಖ್ಯಮಂತ್ರಿಯಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿ (ವಿಆರ್‌ಎಸ್‌) ಕೋರಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್ಪಿ) ಎನ್‌.ವಿ.ಬರಮನಿ ಸಲ್ಲಿಸಿದ್ಧಾರೆ ಎನ್ನಲಾದ ಮನವಿ ಪ್ರತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಮನವಿ ಪತ್ರ ಮೂರು ಪುಟ ಇದೆ. ಒಳಾಡಳಿತ ಇಲಾಖೆ (ಪೊಲೀಸ್‌ ಸೇವೆಗಳು), ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್‌ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಏ.28ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ಬಂದೋಬಸ್ತ್‌ನಲ್ಲಿ ವೇದಿಕೆ ಉಸ್ತುವಾರಿಯನ್ನು ನನಗೆ ವಹಿಸಲಾಗಿತ್ತು. ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಸಭಾ ಸ್ಥಳದಲ್ಲಿ (ಅಲ್ಲಿ ಬೇರೊಬ್ಬ ಎಸ್ಪಿ ಮಟ್ಟದ ಅಧಿಕಾರಿ ಉಸ್ತುವಾರಿಯಲ್ಲಿದ್ದರು) ನಾಲ್ಕೈದು ಮಹಿಳೆಯರು ಕಪ್ಪು ಬಾವುಟ ತೋರಿಸಿ ಘೋಷಣೆ ಕೂಗಿದರು ಆಗ ಸಿದ್ದರಾಮಯ್ಯ ಭಾಷಣ ನಿಲ್ಲಿಸಿ ನನ್ನ ಕಡೆ ಕೈ ಮಾಡಿ ‘ಏಯ್‌ ಯಾವನೊ ಇಲ್ಲಿ ಎಸ್‌ಪಿ ಬಾರಯ್ಯ ಇಲ್ಲಿ’ ಎಂದು ಏರುಧ್ವನಿಯಲ್ಲಿ ಉದ್ಗರಿಸಿದರು. ಅವರ ಕರೆಗೆ ಓಗೊಟ್ಟು ವೇದಿಕೆ ಮೇಲೆ ಹೋದೆನು. ಆಗ ಅವರು ಏಕಾಏಕಿ ಕೈ ಎತ್ತಿ ಕಪಾಳ ಮೋಕ್ಷ ಮಾಡಲು ಮುಂದಾದರು. ಘಟನೆಯಿಂದ ಮನಸ್ಸಿಗೆ ಆಘಾತ ಉಂಟುಮಾಡಿತು. ನಮ್ಮ ಇಡೀ ಕುಟುಂಬದವರು ಮನೋವ್ಯಾಕುಲತೆಗೆ ಒಳಾಗದೆವು. ಇಷ್ಟಾದರೂ ಮುಖ್ಯಮಂತ್ರಿಯಾಗಲಿ ಅಥವಾ ಅವರ ಪರವಾಗಿ ಸರ್ಕಾರದ ಅಧಿಕಾರಿಗಳಾಗಲಿ, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ನನ್ನನ್ನು ಸಾಂತ್ವಾನಿಸುವ ಪ್ರಯತ್ನ ಮಾಡಲಿಲ್ಲ. ನನ್ನ ಸಹೋದ್ಯೋಗಿಗಳು ಕೂಡ ನನಗಾದ ಅವಮಾನವನ್ನು ಪ್ರತಿಭಟಿಸಿ ನೈತಿಕ ಬೆಂಬಲ ವ್ಯಕ್ತಪಡಿಸಲೂ ಇಲ್ಲ.

ADVERTISEMENT

ನಾನು ಮಾಡದೇ ಇರುವ ತ‌ಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ ಅವಮಾನಗೊಂಡ ನನಗೆ ಅನ್ಯಮಾರ್ಗವಿಲ್ಲದೇ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸುತ್ತಿದ್ದು, ಇದನ್ನು ಅಂಗೀಕರಿಸಬೇಕೆಂದು ವಿನಂತಿ ಎಂದು ಪತ್ರದಲ್ಲಿ ಉಲ್ಲೇಖ ಇದೆ.

ಕೋರಿಕೆ ಪತ್ರ 
ಕೋರಿಕೆ ಪತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.