ADVERTISEMENT

ದೇವಾಲಯ ಗೋಪುರಕ್ಕೆ ‘ಗೃಹಲಕ್ಷ್ಮಿ’ ಹಣ ದೇಣಿಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 16:16 IST
Last Updated 18 ಫೆಬ್ರುವರಿ 2025, 16:16 IST
ಕುಂದಗೋಳ ತಾಲ್ಲೂಕಿನ ಗೌಡಗೇರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ದೇವಾಲಯದ ಗೋಪುರ
ಕುಂದಗೋಳ ತಾಲ್ಲೂಕಿನ ಗೌಡಗೇರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ದೇವಾಲಯದ ಗೋಪುರ   

ವಾಸುದೇವ ಎಸ ಮುರಗಿ

ಗುಡಗೇರಿ (ಧಾರವಾಡ ಜಿಲ್ಲೆ): ಕುಂದಗೋಳ ತಾಲ್ಲೂಕಿನ ಗೌಡಗೇರಿಯ ಮಹಿಳೆಯರು ಗ್ರಾಮದಲ್ಲಿ ನಿರ್ಮಾಣ  ಹಂತದಲ್ಲಿರುವ ದ್ಯಾಮವ್ವ ದೇವಿಯ ದೇವಾಲಯದ ಗೋಪುರ ನಿರ್ಮಾಣಕ್ಕೆ ₹1.10 ಲಕ್ಷ  ಗೃಹಲಕ್ಷ್ಮಿ ಯೋಜನೆ ಹಣವನ್ನು ಸಂಗ್ರಹಿಸಿ, ದೇಣಿಗೆ ನೀಡಿದ್ದಾರೆ.

‘ದ್ಯಾಮವ್ವ ದೇವಿ ಗೋಪುರ ನಿರ್ಮಾಣಕ್ಕೆ ಅನೇಕರು ಸ್ವಯಂ ಪ್ರೇರಣೆಯಿಂದ  ದೇಣಿಗೆ ನೀಡಿದ್ದಾರೆ. ಗ್ರಾಮದ ಅನೇಕ ಮಹಿಳೆಯರೂ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಒಂದು ತಿಂಗಳಿನ ₹2 ಸಾವಿರವನ್ನು ದೇಣಿಗೆಯಾಗಿ ಸಲ್ಲಿಸುತ್ತಿದ್ದು,  ₹1.10 ಲಕ್ಷ ಸಂಗ್ರಹವಾಗಿದೆ’ ಎಂದು ದೇವಸ್ಥಾನ ಸಮಿತಿ ಸದಸ್ಯ ಉದ್ದನಗೌಡ ಸಣ್ಣಗೌಡ್ರ ‘ಪ್ರಜಾವಾಣಿ’ಗೆ  ಹೇಳಿದರು.

ADVERTISEMENT

‘ದೇವಾಲಯ ಗೋಪುರ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ಹಣ ನೀಡಲು ಎಲ್ಲಾ ಮಹಿಳೆಯರು ನಿರ್ಧರಿಸಿದ್ದೇವೆ. ಈಗಾಗಲೇ ಬಹುತೇಕ ಮಹಿಳೆಯರು ನೀಡಿದ್ದು, ಇನ್ನೂ ಹಲವರು ಕೊಡುತ್ತಾರೆ’ ಎಂದು ಯಲ್ಲವ್ವ ಮತ್ತೂರ ಹೇಳಿದರು.

‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅನೇಕರಿಗೆ ಆಸರೆಯಾಗಿದೆ. ಮಹಿಳೆಯರು ಯೋಜನೆ ಹಣವನ್ನು ಕುಟುಂಬ ನಿರ್ವಹಣೆಗೆ ಮತ್ತು ಸಮಾಜದ ಕಾರ್ಯಗಳಿಗೆ ದೇಣಿಗೆ ರೂಪದಲ್ಲಿ ಸಲ್ಲಿಸುತ್ತಿರುವುದು ಉತ್ತಮ ಕಾರ್ಯ’ ಎಂದು ಪಂಚ ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.