ADVERTISEMENT

ಡ್ರಾಪಿನ್ ವಾರಿಯರ್ಸ್‌ ಜಯಭೇರಿ

ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌: ಕಮೀಲ್‌ 93 ರನ್‌

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:58 IST
Last Updated 3 ಮೇ 2019, 4:58 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಜೂನಿಯರ್ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದ ನೋಟ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಜೂನಿಯರ್ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದ ನೋಟ   

ಹುಬ್ಬಳ್ಳಿ:ಕಮೀಲ್‌ ಬೊಂಬಾಯವಾಲೆ (93, 92ಎಸೆತ, 12 ಬೌಂಡರಿಗಳು) ಉತ್ತಮ ಬ್ಯಾಟಿಂಗ್ ನೆರವಿನಿಂದ ಡ್ರಾಪಿನ್‌ ವಾರಿಯರ್ಸ್‌ ತಂಡ ಜೂನಿಯರ್‌ ಹುಬ್ಬಳ್ಳಿ ಪ್ರೀಮಿಯರ್ ಲೀಗ್‌ (ಎಚ್‌ಪಿಎಲ್‌)ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಶಿರೂರು ಲೇ ಔಟ್‌ನಲ್ಲಿರುವ ಬಿಡಿಕೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್‌ ತಂಡ ನಿಗದಿತ 30 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಈ ತಂಡದ ಭರವಸೆಯ ಬ್ಯಾಟ್ಸ್‌ಮನ್‌ ರೋಹನ್‌ ಎಂ. ಯರೇಸೀಮಿ (69) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ವಾರಿಯರ್ಸ್‌ ತಂಡಕ್ಕೆ ಉತ್ತಮ ಆರಂಭಿಸಿದ್ದರಿಂದ ಗೆಲುವು ಸುಲಭವಾಯಿತು.

ದಿನದ ಇನ್ನೊಂದು ಪಂದ್ಯದಲ್ಲಿ ಎಲೀಟ್ ಡ್ರೀಮ್ಸ್‌ ತಂಡ ಮೊದಲು ಬ್ಯಾಟ್‌ ಮಾಡಿ 30 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 195 ರನ್‌ ಕಲೆಹಾಕಿತ್ತು. ಶತಕ ಎಸ್. ಗುಂಜಾಳ (71) ಮತ್ತು ರಿಷಿಕೇಶ ರಜಪೂತ್‌ (56)ಅರ್ಧಶತಕದ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು. ಎದುರಾಳಿ ತಂಡ ವಿ.ಕೆ. ವಾರಿಯರ್ಸ್‌ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಡ್ರೀಮ್ಸ್‌ ತಂಡ 14 ರನ್‌ ಗೆಲುವು ಪಡೆದುಕೊಂಡಿತು.

ADVERTISEMENT

ವಿ.ಕೆ. ತಂಡದದೀಪಕ್‌ ಸಿ. ನೀರಲಗಿ, ಶತಕ್‌ ಮತ್ತು ಎಂ.ಎಸ್‌. ಮನೀಷ್‌ ತಲಾ ಎರಡು ವಿಕೆಟ್‌ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆಡಿರುವ ತಲಾ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌, ಡ್ರಾಪಿನ್‌ ಮತ್ತು ಎಲೀಟ್‌ ಡ್ರೀಮ್ಸ್‌ ತಂಡಗಳು ತಲಾ ನಾಲ್ಕು ಅಂಕಗಳನ್ನು ಹೊಂದಿವೆ. ರನ್‌ರೇಟ್‌ ಆಧಾರದ ಮೇಲೆ ಕ್ರಮವಾಗಿ ಮೊದಲ ಮೂರು ಸ್ಥಾನ ಹೊಂದಿವೆ.

ಉಳಿದ ಮೂರು ತಂಡಗಳಾದ ಹುಬ್ಬಳ್ಳಿ ಟೈಗರ್ಸ್‌, ವಿ.ಕೆ. ವಾರಿಯರ್ಸ್‌ ಮತ್ತು ಯುನೈಟೆಡ್‌ ಭಟ್ಕಳ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿವೆ.

ಗುರುವಾರ ನಡೆಯವ ಪಂದ್ಯಗಳಲ್ಲಿ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌–ಯುನೈಟೆಡ್‌ ಭಟ್ಕಳ (ಬೆಳಿಗ್ಗೆ 8.30) ಮತ್ತು ಡ್ರಾಪಿನ್‌ ವಾರಿಯರ್ಸ್‌–ವಿ.ಕೆ. ವಾರಿಯರ್ಸ್‌ (ಮ. 1.15) ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.