ADVERTISEMENT

ಹುಬ್ಬಳ್ಳಿ: ಗೋದಾಮಿಗೆ ಬೆಂಕಿ, ₹4.5 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗೆ ಹಾನಿ

ಪ್ರಲ್ಹಾದ ಜೋಶಿ ಪತ್ನಿ ಒಡೆತನದ ಗೋದಾಮು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 10:28 IST
Last Updated 27 ಅಕ್ಟೋಬರ್ 2020, 10:28 IST
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ   

ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಶೆರೇವಾಡ ಕ್ರಾಸ್ ಬಳಿಯ ವಿಭವ ಕೈಗಾರಿಕೆಗೆ ಸೇರಿದ ಪೊರಕೆ ತಯಾರಿಕೆ ಘಟಕ ಮತ್ತು ಗೋದಾಮಿನಲ್ಲಿ ಸೋಮವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿ ಅಂದಾಜು ₹ 4.5 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಮತ್ತು ಎಚ್.ಎನ್. ನಂದಕುಮಾರ ಒಡೆತನದ ಕೈಗಾರಿಕೆ ಇದಾಗಿದೆ. ಹಾನಿಯಾದ ಸ್ಥಳಕ್ಕೆ ಜೋಶಿ ಮಂಗಳವಾರ ಭೇಟಿ ನೀಡಿದರು.

ವಿಭವ ಕೈಗಾರಿಕೆಯಲ್ಲಿ 555 ಮಂಕಿ ಪೊರಕೆ, ಫಿನಾಯಿಲ್ ಉತ್ಪಾದನೆ ಮಾಡಲಾಗುತ್ತಿತ್ತು.

ADVERTISEMENT

ಈ ವೇಳೆ ಮಾತನಾಡಿದ ಜೋಶಿ ಬೆಂಕಿ ಅವಘಡದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಈ ಘಟನೆ ಕುರಿತು ಯಾರನ್ನೂ ದೂಷಿಸುವುದಿಲ್ಲ. ಅನೇಕ ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಅವಘಡಗಳು ಮರಳಿ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.