ADVERTISEMENT

ಧಾರವಾಡ ಕವಿಸಂ ಚುನಾವಣೆ: ಅಧ್ಯಕ್ಷರಾಗಿ ಚಂದ್ರಕಾಂತ್ ಬೆಲ್ಲದ ಪುನರಾಯ್ಕೆ

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪುನರಾಯ್ಕೆಯಾಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 26 ಮೇ 2025, 11:33 IST
Last Updated 26 ಮೇ 2025, 11:33 IST
<div class="paragraphs"><p>ಚಂದ್ರಕಾಂತ್ ಬೆಲ್ಲದ</p></div>

ಚಂದ್ರಕಾಂತ್ ಬೆಲ್ಲದ

   

ಧಾರವಾಡ: ನಾಡಿನ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ– ಶಂಕರ ಹಲಗತ್ತಿ ಬಣ ಗೆಲುವು ಸಾಧಿಸಿದೆ.

ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾಗಿ ಡಾ‌‌‌‌.ಸಂಜೀವ ಕುಲಕರ್ಣಿ, ಕಾರ್ಯಾಧ್ಯಕ್ಷರಾಗಿ ಬಸವಪ್ರಭು ಹೊಸಕೇರಿ, ಕೋಶಾಧ್ಯಕ್ಷರಾಗಿ ಸತೀಶ ತುರಮರಿ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿಯಾಗಿ ಶಂಕರಕುಂಬಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ. ಮಹೇಶ ಹೊರಕೇರಿ, ಜಿನದತ್ತ ಹಡಗಲಿ, ಪ್ರೊ.ಶಶಿಧರ ತೊಡಕರ, ಶಿವಾನಂದ ಭಾವಿಕಟ್ಟಿ, ಮಹಿಳಾ ಮೀಸಲು ಸದಸ್ಯ ಸ್ಥಾನಕ್ಕೆ ವಿಶ್ವೇಶ್ವರಿ ಹಿರೇಮಠ ಹಾಗೂ ಎಸ್‌ಸಿಎಸ್‌ಟಿ ಮೀಸಲು ಸದಸ್ಯ ಸ್ಥಾನಕ್ಕೆ ಪ್ರೊ.ಧನವಂತ ಹಾಜವಗೋಳ ಆಯ್ಕೆಯಾಗಿದ್ದಾರೆ.

ADVERTISEMENT

‘ಜೂನ್‌ 1ರಂದು ಸಂಘದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಲಾಗುವುದು. ಇದು ಸಂಘದ ನಿಯಮ’ ಎಂದು ಚುನಾವಣಾಧಿಕಾರಿ ಸಿ.ಎಸ್‌.ನೇಗಿನಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.