ADVERTISEMENT

28ರಂದು ಗಂಗೂಬಾಯಿ ಹಾನಗಲ್ ಸಂಗೀತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 7:05 IST
Last Updated 25 ಅಕ್ಟೋಬರ್ 2018, 7:05 IST

ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್ ಸಂಗೀತ ಮಹೋತ್ಸವ ಹುಬ್ಬಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಇದೇ 28ರಂದು ನಡೆಯಲಿದೆ ಎಂದು ಕಲಾ ಧರೋಹರ ಸಂಸ್ಥೆಯ ಸಹ ಉಪಾಧ್ಯಕ್ಷ ವಿವೇಕ ಪವಾರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.45ಕ್ಕೆ ಹರೀಶ ಕುಲಕರ್ಣಿ ಅವರು ಕೊಳಲು ವಾದನ ಪ್ರಸ್ತುತಪಡಿಸುವರು. ನಂತರ ಗಾಯಕ ಡಾ. ಎಂ. ವೆಂಕಟೇಶ ಕುಮಾರ ಅವರಿಗೆ ಶಾಸ್ತ್ರೀಯ ಸಂಗೀತ, ಸಂಜೆ 5.30ಕ್ಕೆ ವಿಜಯ ಘಾಟೆ ಅವರ ತಬಲಾ ವಾದನ, ನಂತರ ಸಂಜೀವ ಅಭ್ಯಂಕರ ಅವರಿಂದ ಶಾಸ್ತ್ರೀಯ ಗಾಯನ ಇದೆ ಎಂದು‌ರು.

ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇದೆ. ಹೊಸೂರಿನ ಕೆನರಾ ಹೋಟೆಲ್, ಕರ್ನಾಟಕ ಹೋಟೆಲ್ ಹಾಗೂ ಕೊ‍ಪ್ಪಿಕರ ರಸ್ತೆಯ ಸಾಹಿತ್ಯ ಭಂಡಾರದಲ್ಲಿ ಪಾಸ್‌ ಪಡೆಯಬಹುದು ಎಂದರು. ಸಂಸ್ಥೆಯ ಉಪಾಧ್ಯಕ್ಷ ದಿನೇಶ್‌ ಹಾನಗಲ್, ಖಜಾಂಚಿ ರಘುನಂದನ ಗೋಡಸೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.