ADVERTISEMENT

‘ಅಂಧರು ,ಅನಾಥರ ಬಾಳಿಗೆ ಬೆಳಕು ಕಲ್ಪಿಸಿಕೊಟ್ಟವರು ಗವಾಯಿಗಳು’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 16:07 IST
Last Updated 4 ಮಾರ್ಚ್ 2024, 16:07 IST
ತಾಲ್ಲೂಕ ಘಟಕದಿಂದ ಪಟ್ಟಣದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಿದರು.
ತಾಲ್ಲೂಕ ಘಟಕದಿಂದ ಪಟ್ಟಣದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಿದರು.   

ಕಲಘಟಗಿ: ಪುಟ್ಟರಾಜ ಗವಾಯಿಗಳು ಅಂಧ, ,ಅನಾಥರು, ದಿನ–ದಲಿತರಿಗೆ ಸಂಗೀತ ಸೇವೆ ನೀಡಿ ಅವರ ಬಾಳಿಗೆ ಬೆಳಕು ನೀಡಿದವರು ಎಂದು ಪುಟ್ಟರಾಜ ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಕಳಸಣ್ಣವರ ಹೇಳಿದರು.

ಪುಟ್ಟರಾಜ ಸೇವಾ ಸಮಿತಿ ಗದಗ–ಕಲಘಟಗಿ ತಾಲ್ಲೂಕ ಘಟಕದಿಂದ ಪಟ್ಟಣದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಿ ಮಾತನಾಡಿದರು.

ತಾಲ್ಲೂಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಯ್ಯಸ್ವಾಮಿ ತೋಟಗಂಟಿ  ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್ ಸುನಗದ, ಮಂಜುಳಾ ನಾಯಕ, ಗಿರೀಶ ಬಂಡಿ, ಮಂಜುನಾಥ ಜಾಯನಗೌಡ, ಶಿವಪುತ್ರಯ್ಯ ತೇಗುರುಮಠ, ಶಿವಪ್ಪ ಧನಿಗೊಂಡ, ಶ್ರೀಮತಿ ಕಳಸನ್ನವರ ಹಾಗೂ ವಿ.ಎಸ್ ನಾಗಲೋಟಿಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.